ರಸ್ತೆ ಮೇಲೆ ಕೆಎಸ್‌ಟಿಡಿಸಿ ರಾಜರಥ
ಕೆಎಸ್‌ಟಿಡಿಸಿ ವಿಶ್ವ ಪ್ರಸಿದ್ಧ ಜೋಗ ಜಲಪಾತವನ್ನು, ತೀರ್ಥಕ್ಷೇತ್ರ ಗೋಕರ್ಣ, ಪ್ರವಾಸಿ ಪ್ರಿಯರ ಗೋವಾವನ್ನು ತೋರಿಸಲು ಮೈಸೂರು ಮತ್ತು ರಾಜಧಾನಿ ಬೆಂಗಳೂರಿನಿಂದ ನೂತನ ಪ್ರವಾಸ ಪ್ಯಾಕೇಜ್‌ಗಳನ್ನು ಹೊರತಂದಿದೆ. ಐದು ದಿನಗಳ ಪ್ರವಾಸ ಪ್ಯಾಕೇಜ್‌ಗಳು ಇದಾಗಿದ್ದು, ಬಜೆಟ್ ಸ್ನೇಹಿಯಾಗಿವೆ.
ನಾಡು ಸುತ್ತಬೇಕು, ನುಡಿಗಳ ಪರಿಚಯ ನಮಗಾಗಬೇಕು. ಲೋಕೋ ಭಿನ್ನ ರುಚಿ ಎನ್ನುತ್ತಾರೆ, ನಾನದನ್ನು ತಿಂದು ತಿರುಗಿಯೇ ನೋಡಬೇಕು ಎನ್ನುವವರಿಗೆ ಇದೊಂದಿದೆ ಸುಂದರ ಅವಕಾಶ. ಪ್ರವಾಸ, ಪ್ರವಾಸ ಮತ್ತದೇ ಜವಾಬ್ದಾರಿಯುತ ಪ್ರವಾಸ. ಇದರಿಂದಲೇ ಎಲ್ಲೆಡೆಯ ಎಲ್ಲ ಅನುಭವಗಳು ನಿಮಗಾಗಬಹುದು. ಸುತ್ತಿ ಸುಳಿದು ಸಾಕಷ್ಟು ತಿಳಿದರೂ ಈ ಇತಿಹಾಸ ಮುಗಿಯದು. ಓದಿ ಯಾವ ಇತಿಹಾಸ ತಿಳಿಯಲು ಸಾಧ್ಯ? ಸರ್ವಜ್ಞನೇ ಸರ್ವವನ್ನು ಪ್ರವಾಸದಲ್ಲಿ ಕಂಡು, ಕೇಳಿ, ಅನುಭವಿಸಿ ಅರಿತನಂತೆ. ಅದರಂತೆ ಸ್ಥಳವೊಂದರ ಪ್ರಸ್ತುತ ಮತ್ತು ಪುರಾತನ ಸ್ಥಿತಿಗತಿಗಳನ್ನು, ಅಲ್ಲಿಗೆ ಭೇಟಿ ನೀಡುವುದರಿಂದ ಅನುಭವದ ನೆಲೆಯಲ್ಲಿ ಅರಿವಿಗೆ ತಂದುಕೊಳ್ಳಬಹುದು. ಇಂಥ ಪ್ರವಾಸಕ್ಕೆ ಸಹಕರಿಸುವ ಹಲವು ಇತಿಹಾಸ, ವನವಾಸ, ಊಟೋಪಚಾರ, ಆಚರಣೆ, ಸಂಸ್ಕೃತಿ, ಉಡುಗೆ-ತೊಡುಗೆ, ಸ್ಥಳ ಪುರಾಣಗಳನ್ನು ಪರಿಚಯಿಸುತ್ತ ನಿಮ್ಮನ್ನು ಸುತ್ತಿಸಿ, ಆಯಾಸ ಮರೆಸಲು ಮನಮೋಹಿಸುವ ತಾಣಗಳಲ್ಲಿ ಉಳಿದುಕೊಳ್ಳಲು ವಾಸ್ತವ್ಯಗಳನ್ನು ಸುವ್ಯವಸ್ಥಿತವಾಗಿರಿಸಿರುವ ಕೆಎಸ್‌ಟಿಡಿಸಿ ಈಗಾಗಲೇ ಜನಮನಗಳನ್ನು ಗೆದ್ದಿದೆ.
ಇದು ನಮ್ಮ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ವಿನೂತನ ಪ್ರಯತ್ನ. ಹೀಗಂದ ಮೇಲೆ ಇನ್ನೂ ಹೇಳಬೇಕೆ? ರಾಜ್ಯದಲ್ಲಿನ ಎಲ್ಲ ಪ್ರವಾಸಿ ತಾಣಗಳನ್ನು ಬಲ್ಲ ಹಿರಿಯಣ್ಣನಂತೆ ಈ ಇಲಾಖೆಯಿದೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ, ನಮ್ಮ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮವು ತೋರಿಸದ ತಾಣವಿಲ್ಲ. ಸುಂದರ ತಾಣಗಳಲ್ಲಿ ಮತ್ತದೇ ಸುಂದರ ಸ್ಥಳೀಯತೆಯ ಸ್ವಾದವನ್ನು ತನ್ನ ಜತೆಗೆ ಪ್ರವಾಸಕ್ಕೆ ಬರುವ ಪಯಣಿಗನಿಗೆ ಉಣಬಡಿಸಬೇಕು ಎನ್ನುವ ತವಕ ಅದರದ್ದು.
ಇದೇ ಕಾರಣಕ್ಕೆ, ವಿಶ್ವ ಪ್ರಸಿದ್ಧ ಜೋಗ ಜಲಪಾತವನ್ನು, ತೀರ್ಥಕ್ಷೇತ್ರ ಗೋಕರ್ಣ, ಪ್ರವಾಸಿ ಪ್ರಿಯರ ಗೋವಾವನ್ನು ತೋರಿಸಲು ಮೈಸೂರು ಮತ್ತು ರಾಜಧಾನಿ ಬೆಂಗಳೂರಿನಿಂದ ನೂತನ ಪ್ರವಾಸ ಪ್ಯಾಕೇಜ್‌ಗಳನ್ನು ಹೊರತಂದಿದೆ. ಐದು ದಿನಗಳ ಪ್ರವಾಸ ಪ್ಯಾಕೇಜ್‌ಗಳು ಇದಾಗಿದ್ದು, ಬಜೆಟ್ ಸ್ನೇಹಿಯಾಗಿವೆ. ಪ್ರತಿ ಪ್ಯಾಕೇಜ್‌ನಲ್ಲೂ ಶಿವನ ಆತ್ಮಲಿಂಗ ಎಂದು ನಂಬಲಾಗಿರುವ ಗೋಕರ್ಣದ ಮಹಬಲೇಶ್ವರ, ಪ್ರವಾಸಿಗರ ಮನಮುದಗೊಳಿಸುವ ಗೋವಾ, ಇಲ್ಲಿ ಧಾರ್ಮಿಕ ಪ್ರವಾಸವೂ ಇದೆ. ಅಂಕೋಲಾ ಬೀಚ್, ಸನ್‌ರೈಸ್ ವ್ಯೂ ಪಾಯಿಂಟ್, ವಾಗೆಟರ್ ಬೀಚ್, ನದಿ ವಿಹಾರ ಇನ್ನೂ ಏನೇನೋ ಇದೆ. ಎಲ್ಲವನ್ನೂ ನೋಡಿಕೊಂಡು, ಜಂಜಾಟಗಳನ್ನೆಲ್ಲ ಬದಿಗಿಟ್ಟು ಹಾಯಾಗಿ ಓಡಾಡಿ ಬರಲು ಇದೊಂದು ಸುಂದರ ಅವಕಾಶ. ಮತ್ತೇಕೆ ತಡ ಕೆಎಸ್ಟಿಡಿಸಿ ನಿಮಗಾಗಿ ಕಾಯುತ್ತಿದೆ. ಮನೆಯ ಹೊಸ್ತಿಲಿನಿಂದ ಆಚೆಗೆ ನಡೆಯಿರಿ.

ಗೋಕರ್ಣದ ಐತಿಹ್ಯ
ಲಂಕಾಧಿಪತಿ ರಾವಣನು ತನ್ನ ತಾಯಿಯ ಪೂಜೆಗಾಗಿ ಶಿವನ ಆತ್ಮ ಲಿಂಗವನ್ನು ಲಂಕೆಗೆ ಕೊಂಡೊಯ್ಯಲು ಪರಶಿವನ ಕುರಿತು ಘೋರ ತಪಸ್ಸು ಮಾಡಿದನು. ಇದಕ್ಕೆ ಶಿವನು ಪ್ರತ್ಯಕ್ಷನಾಗಿ ಶರತ್ತು ವಿಧಿಸಿ ಆತ್ಮಲಿಂಗವನ್ನು ನೆಲದ ಮೇಲೆ ಇಟ್ಟಲ್ಲಿಯೇ ಶಾಶ್ವತವಾಗಿ ನೆಲೆಸಿಬಿಡುತ್ತದೆ ಎಂದನು. ಇದರಿಂದ ದೇವತೆಗಳು ಆತಂಕಗೊಂಡು, ಆತ್ಮಲಿಂಗವನ್ನು ಲಂಕೆಗೆ ಹೋಗದಂತೆ ತಡೆಯಲು ವಿಷ್ಣು ಮತ್ತು ಗಣೇಶನನ್ನು ಪ್ರಾರ್ಥಿಸಿದರು. ರಾವಣನು ಗೋಕರ್ಣದ ಸಮುದ್ರ ತೀರ ತಲುಪಿದಾಗ, ವಿಷ್ಣುವು ಸಂಧ್ಯಾಕಾಲದ ಭ್ರಮೆಯನ್ನು ಸೃಷ್ಟಿಸಿದನು. ಸಂಧ್ಯಾವಂದನೆಯನ್ನು ರಾವಣ ತಪ್ಪಿಸಿದವನಲ್ಲವಾದ್ದರಿಂದ ಬಾಲಕನ ರೂಪದಲ್ಲಿದ್ದ ಗಣೇಶನಲ್ಲಿ ಆತ್ಮಲಿಂಗವನ್ನು ಹಿಡಿದುಕೊಳ್ಳಲು ಬೇಡಿಕೊಂಡನು. ಗಣೇಶನು, ʻನಾನು ಮೂರು ಬಾರಿ ಕರೆದರೂ ನೀವು ಬರದಿದ್ದರೆ, ಲಿಂಗವನ್ನು ಕೆಳಗೆ ಇಡುತ್ತೇನೆʼ ಎಂದು ಷರತ್ತು ವಿಧಿಸಿ ಒಪ್ಪಿದನು. ರಾವಣ ಸಂಧ್ಯಾವಂದನೆಗೆ ಹೋದ ಕೂಡಲೇ ಗಣೇಶನು ಮೂರು ಬಾರಿ ಕರೆದು, ಆತ್ಮಲಿಂಗವನ್ನು ನೆಲದ ಮೇಲೆ ಇಟ್ಟನು. ಆಗಲೇ ಆತ್ಮಲಿಂಗ ಅಲ್ಲಿ ನೆಲೆಸಿಬಿಟ್ಟಿತು. ರಾವಣನು ಸಂಪೂರ್ಣ ಬಲದಿಂದ ಲಿಂಗವನ್ನು ಎತ್ತಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ಈ ಕ್ಷೇತ್ರಕ್ಕೆ ಮಹಾಬಲೇಶ್ವರ ಎಂಬ ಹೆಸರು ಬಂದಿತು.

ಗೋವಾ
ಈಗ ಪಡ್ಡೆ ಹೈಕಳಿಗೆ ಗೋವಾ ಎಂದರೆ ಕ್ಲಬ್, ಪಬ್, ಬಾರ್, ಬೀಚ್, ಬೆಡಗಿಯರು, ಮಸಾಜ್ ಸೆಂಟರ್ ನೆನಪಾಗಿ ಬಿಡುತ್ತವೆ. ಆದರೂ, ಇವುಗಳ ಜತೆಗೆ ಪರಕೀಯರ ಹಲವು ದಾಳಿಗಳಿಂದ ಉಳಿದುಕೊಂಡು, ಉಳಿಸಿಕೊಂಡು ಬಂದಿರುವ ಹಲವು ದೇವಾಲಯಗಳು ಅಲ್ಲಿವೆ. ಶಾಂತ ದುರ್ಗೆ, ಮಂಗೇಶಿ ದೇವಸ್ಥಾನಗಳು ಹೀಗೆ ಹಲವು ದೇವಾಲಯಗಳು ಅಲ್ಲಿ ಇಂದಿಗೂ ಪ್ರವಾಸಿಗರ ಕಣ್ಮನ ತಣಿಸುವಂಥವು. ಎಲ್ಲವನ್ನು ಕೆಎಸ್‌ಟಿಡಿಸಿ ತಿರುಗಿಸಿ ಪ್ರವಾಸಿಗೆ ತೋರಿಸಲಿದೆ.
ಪ್ಯಾಕೇಜ್
ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.
ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಸುಖ ಪ್ರಯಾಣ.
ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ
ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ
ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ
ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದ್ದು, ಬೇರೆಲ್ಲೂ ಸಿಗದ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜನೆಯ ಪ್ರವಾಸದ ಭರವಸೆಯನ್ನು ನೀಡುತ್ತದೆ.
ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.
ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.
ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನಸ್ಸಿಗೆ ಸಮಾಧಾನ ಆಗುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.
ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

ಮೈಸೂರು ಟು ಗೋವಾ
ದಿನ-1
ರಾತ್ರಿ 8ಕ್ಕೆ ಮೈಸೂರಿನಿಂದ ಹೊರಡಲಾಗುತ್ತದೆ.
ದಿನ-2
ಬೆಳಗ್ಗೆ 3:00-5:00 ಸಾಗರ ಅಥವಾ ಶಿವಮೊಗ್ಗದಲ್ಲಿ ಫ್ರೆಶ್ಅಪ್.
7:00-8:30ರವರೆಗೆ ವಿಶ್ವ ವಿಖ್ಯಾತ ಜೋಗಜಲಪಾತವನ್ನು ವೀಕ್ಷಿಸಿ ನಂತರ ಉಪಾಹಾರ.
ಬೆಳಗ್ಗೆ 8:30ಕ್ಕೆ ಜೋಗಜಲಪಾತದಿಂದ ಹೊರಡಲಾಗುತ್ತದೆ.
ಬೆಳಗ್ಗೆ 10:30-11:30ರವರೆಗೆ ಗೋಕರ್ಣದಲ್ಲಿನ ಮಹಾಬಲೇಶ್ವರ ದೇವಾಲಯದ ದರ್ಶನ.
ಮಧ್ಯಾಹ್ನ 12:00-1:45ಕ್ಕೆ ಬಸ್ ಅಂಕೋಲ ತಲುಪುತ್ತದೆ. ಅಲ್ಲಿಯೇ ಮಧ್ಯಾಹ್ನದ ಊಟ.
ಸಂಜೆ 4:30-6:00ಕ್ಕೆ ಮರ್ಗೋವಾದ ಕೋಲ್ವಾ ಬೀಚ್‌ಗೆ ಭೇಟಿ.
ಸಂಜೆ 7:30ಕ್ಕೆ ಹಳೆ ಗೋವಾ ಭೇಟಿ.
ಸಂಜೆ 7:30 ಚೆಕ್ ಇನ್. ಹಳೆ ಗೋವಾದ ಹೊಟೇಲ್‌ನಲ್ಲಿ ವಾಸ್ತವ್ಯ.
ದಿನ-3
ಬೆಳಗ್ಗೆ 5:30ಕ್ಕೆ ಹಳೆಯ ಗೋವಾ ರೆಸಿಡೆನ್ಸಿಯಿಂದ ನಿರ್ಗಮನ.
ಬೆಳಗ್ಗೆ 6:30-7:30ರವರೆಗೆ ವಾಗೇಟರ್ ಬೀಚ್‌ಗೆ ಭೇಟಿ.
ಬೆಳಗ್ಗೆ 8:00-8:30ರವರೆಗೆ ಕ್ಯಾಲಂಗುಟ್ಟೆ ಬೀಚ್ ಬಳಿ ಉಪಾಹಾರ.
ಬೆಳಗ್ಗೆ 9:20-11:30ರವರೆಗೆ ದೋಣಿಯಲ್ಲಿ ಫೋರ್ಟ್ ಅಗುವಾಡಾ ಮತ್ತು ಡಾಲ್ಫಿನ್ ಭೇಟಿ.
ಬೆಳಗ್ಗೆ 11:30ಕ್ಕೆ ಫೋರ್ಟ್ ಅಗುವಾಡಾದಿಂದ ನಿರ್ಗಮನ.
ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಕ್ಯಾಲಂಗುಟ್ ಬೀಚ್‌ಗೆ ಭೇಟಿ, ಊಟ.
ಸಂಜೆ 5-7ರವರೆಗೆ ಮಾಂಡೋವಿ ನದಿಯಲ್ಲಿ ದೋಣಿ ವಿಹಾರ.
ರಾತ್ರಿ 8ಕ್ಕೆ ಗೋವಾದಲ್ಲಿ ಭೋಜನ. ರಾತ್ರಿ ಹೊಟೇಲ್‌ನಲ್ಲಿ ವಾಸ್ತವ್ಯ.
ದಿನ-4
ಬೆಳಗ್ಗೆ 6 ಗಂಟೆಗೆ ಹೋಟೆಲ್‌ನಿಂದ ಸೂರ್ಯೋದಯ ವ್ಯೂ ಪಾಯಿಂಟ್.
ಬೆಳಗ್ಗೆ 6:45-7.45ರವರೆಗೆ ಸೂರ್ಯೋದಯಕ್ಕೆ ಡೊನಪೌಲಾಗೆ ಭೇಟಿ.
ಬೆಳಗ್ಗೆ 9:00ಕ್ಕೆ ಓಲ್ಡ್ ಗೋವಾ ರೆಸಿಡೆನ್ಸಿಯಿಂದ ಹೊರಡುವುದು.
ಬೆಳಗ್ಗೆ 10:00-11:00ರವರೆಗೆ ಸೇಂಟ್ ಕ್ಸೇವಿಯರ್ ಚರ್ಚ್‌ಗೆ ಭೇಟಿ.
ಬೆಳಗ್ಗೆ 11:30ರಿಂದ ಮಧ್ಯಾಹ್ನ 1:30 ಶ್ರೀ ಮಂಗೇಶಿ ದೇವಸ್ಥಾನ ಮತ್ತು ಶ್ರೀ ಶಾಂತದುರ್ಗಾ ದೇವಸ್ಥಾನಕ್ಕೆ ಭೇಟಿ.
ಮಧ್ಯಾಹ್ನ 1:30–2:00ರವರೆಗೆ ಪೋಂಡಾದಲ್ಲಿ ಊಟ.
ಮಧ್ಯಾಹ್ನ 2:00ಕ್ಕೆ ನಿರ್ಗಮನ.
ಸಂಜೆ 5:15–5:45ರವರೆಗೆ ಅಂಕೋಲಾದಲ್ಲಿ ಚಹಾ ವಿರಾಮ.
ರಾತ್ರಿ 9:00ಕ್ಕೆ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಭೋಜನ.
ದಿನ-5
ಬೆಳಗ್ಗೆ ಮೈಸೂರಿಗೆ ಬರಲಾಗುತ್ತದೆ.

ಬೆಂಗಳೂರು ಟು ಗೋವಾ
ದಿನ-1
ರಾತ್ರಿ-8:00ಕ್ಕೆ ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ನಿರ್ಗಮನ.
ದಿನ-2
ಬೆಳಗ್ಗೆ 4:30-6:00ರವರೆಗೆ ಸಾಗರ ಅಥವಾ ಶಿವಮೊಗ್ಗದಲ್ಲಿ ಫ್ರೆಶ್ಅಪ್.
7:00-8:30ರವರೆಗೆ ವಿಶ್ವ ವಿಖ್ಯಾತ ಜೋಗಜಲಪಾತದ ವೀಕ್ಷಣೆ ಮತ್ತು ಉಪಾಹಾರ.
ಬೆಳಗ್ಗೆ 8:30ಕ್ಕೆ ಜೋಗಜಲಪಾತದಿಂದ ನಿರ್ಗಮನ.
ಬೆಳಗ್ಗೆ 11:30-12:30ರವರೆಗೆ ಗೋಕರ್ಣದಲ್ಲಿನ ಮಹಾಬಲೇಶ್ವರ ದೇವಾಲಯದ ದರ್ಶನ.
ಮಧ್ಯಾಹ್ನ 1:30-2:15ಕ್ಕೆ ಬಸ್ ಅಂಕೋಲ ತಲುಪಲಿದ್ದು, ಅಲ್ಲಿ ಮಧ್ಯಾಹ್ನದ ಊಟ.
ಸಂಜೆ 5:15–6:15ರವರೆಗೆ ಮರ್ಗೋವಾದ ಕೋಲ್ವಾ ಬೀಚ್‌ಗೆ ಭೇಟಿ.
ಸಂಜೆ 6:30-7:00 ಓಲ್ಡ್ ಗೋವಾಕ್ಕೆ ಆಗಮನ.
ಸಂಜೆ 7:30 ಚೆಕ್ ಇನ್, ರಾತ್ರಿ ಹೊಟೇಲ್‌ನಲ್ಲಿ ವಾಸ್ತವ್ಯ.
ದಿನ-3
ಬೆಳಗ್ಗೆ 5:30ಕ್ಕೆ ಓಲ್ಡ್ ಗೋವಾ ರೆಸಿಡೆನ್ಸಿಯಿಂದ ನಿರ್ಗಮನ.
ಬೆಳಗ್ಗೆ 6:30-7:30ರವರೆಗೆ ವಾಗೇಟರ್ ಬೀಚ್‌ಗೆ ಭೇಟಿ.
ಬೆಳಗ್ಗೆ 8:00-8:30ರವರೆಗೆ ಕ್ಯಾಲಂಗುಟ್ಟೆ ಬೀಚ್ ಬಳಿ ಉಪಾಹಾರ.
ಬೆಳಗ್ಗೆ 9:20-11:30ರವರೆಗೆ ದೋಣಿಯಲ್ಲಿ ಫೋರ್ಟ್ ಅಗುವಾಡಾ ಮತ್ತು ಡಾಲ್ಫಿನ್ ವೀಕ್ಷಣೆ.
ಬೆಳಗ್ಗೆ 11:30ಕ್ಕೆ ಫೋರ್ಟ್ ಅಗುವಾಡಾದಿಂದ ನಿರ್ಗಮನ.
ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಕ್ಯಾಲಂಗುಟ್ ಬೀಚ್‌ಗೆ ಭೇಟಿ ಮತ್ತು ಊಟ.
ಸಂಜೆ 5-7ರವರೆಗೆ ಮಾಂಡೋವಿ ನದಿಯಲ್ಲಿ ದೋಣಿ ವಿಹಾರ.
ರಾತ್ರಿ 8ಕ್ಕೆ ಗೋವಾದಲ್ಲಿ ರಾತ್ರಿ ಊಟ, ಹೊಟೇಲ್‌ನಲ್ಲಿ ವಾಸ್ತವ್ಯ.

ದಿನ-4
ಬೆಳಗ್ಗೆ 6ಕ್ಕೆ ಜಿಟಿಡಿಸಿ ಹೊಟೇಲ್.
ಬೆಳಗ್ಗೆ 6:45-7:45ರವರೆಗೆ ಸೂರ್ಯೋದಯಕ್ಕೆ ಡೊನಪೌಲಾಗೆ ಭೇಟಿ.
ಬೆಳಗ್ಗೆ 7:45ಕ್ಕೆ ಓಲ್ಡ್ ಗೋವಾ ರೆಸಿಡೆನ್ಸಿಯಿಂದ ಚೆಕ್ಔಟ್.
ಬೆಳಗ್ಗೆ 10:00-11:00ರವರೆಗೆ ಸೇಂಟ್ ಕ್ಸೇವಿಯರ್ ಚರ್ಚ್‌ಗೆ ಭೇಟಿ.
ಬೆಳಗ್ಗೆ 11:30ರಿಂದ ಮಧ್ಯಾಹ್ನ 1:30 ಶ್ರೀ ಮಂಗೇಶಿ ದೇವಸ್ಥಾನ ಮತ್ತು ಶ್ರೀ ಶಾಂತದುರ್ಗಾ ದೇವಸ್ಥಾನಕ್ಕೆ ಭೇಟಿ.
ಮಧ್ಯಾಹ್ನ 1:30–2:00ರವರೆಗೆ ಪೋಂಡಾದಲ್ಲಿ ಊಟ.
ಮಧ್ಯಾಹ್ನ 2:00ಕ್ಕೆ ಪೋಂಡಾದಿಂದ ನಿರ್ಗಮನ.
ಸಂಜೆ 5:15–5:45ರವರೆಗೆ ಅಂಕೋಲಾದಲ್ಲಿ ಚಹಾ ವಿರಾಮ.
ರಾತ್ರಿ 9:00ಕ್ಕೆ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಊಟ.
ದಿನ-5
ಬೆಳಗ್ಗೆ 6:00ಕ್ಕೆ ಪ್ರವಾಸವು ಬೆಂಗಳೂರಿನ ಯಶವಂತಪುರ ಕೆಎಸ್‌ಟಿಡಿಸಿ ಪ್ರಧಾನ ಕಚೇರಿಯಲ್ಲಿ ಕೊನೆಗೊಳ್ಳುತ್ತದೆ.
ಸಂಪರ್ಕ:
ಕೆಎಸ್‌ಟಿಡಿಸಿ ಕಚೇರಿ ಯಶವಂತಪುರ
ಬೆಂಗಳೂರು- +91 80-4334 4334

ಹಂಪಿಯಲ್ಲಿ ಮಯೂರ ಆತಿಥ್ಯ
ಮಯೂರ ಹೆಸರಿಗೆ ತಕ್ಕಂತ ಹೊಟೇಲ್. ಮಯೂರದವರು ಅತ್ಯುತ್ತಮ ಊಟೋಪಚಾರ ಒದಗಿಸುತ್ತಾರೆ ಎಂಬುದನ್ನು ಮತ್ತೆ ಮತ್ತೆ ಹೇಳಬೇಕಿಲ್ಲ. ಪ್ರವಾಸಿಗರ ಬಯಕೆಗಳನ್ನು ಈಡೇರಿಸಿ ಅವರನ್ನು ಸಂತೃಪ್ತಿಗೊಳಿಸಲು ಪ್ರತಿ ಪ್ರವಾಸಿ ತಾಣದಲ್ಲೂ ಮಯೂರ ಹೊಟೇಲ್ ಇದ್ದೇ ಇದೆ. ಆತಿಥ್ಯ ಕ್ಷೇತ್ರ ಎಂದ ಕೂಡಲೇ ಮಯೂರ ಹೆಸರು ನೆನಪಾಗಿಯೇ ಆಗುತ್ತದೆ ಅಷ್ಟರಮಟ್ಟಿಗೆ ಅದು ಪ್ರಸಿದ್ಧಿಗಳಿಸಿದೆ. ಊರಿನ ಗುರುತು ಪರಿಚಯವಿಲ್ಲದ ಪ್ರವಾಸಿಗರ ಆಯ್ಕೆಯೂ ಮಯೂರವೇ ಆಗಿರುತ್ತದೆ. ಕೆಎಸ್‌ಟಿಡಿಸಿ ಪ್ಯಾಕೇಜ್‌ನಡಿ ಪ್ರವಾಸಕ್ಕೆ ಹೊರಡುವ ಎಲ್ಲ ಪ್ರವಾಸಿಗರಿಗೂ ಹೊಟೇಲ್ ಮಯೂರ ಅಚ್ಚುಕಟ್ಟಾದ ವಾಸ್ತವ್ಯ ಮತ್ತು ಊಟೋಪಚಾರಗಳನ್ನು ನೀಡುತ್ತದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಮಯೂರ ಹೊಟೇಲ್‌ನ ಶಾಖೆಗಳಿವೆ. ಇದು ಗುಣಮಟ್ಟ ಮತ್ತು ಆತ್ಮೀಯವಾದ ಆತಿಥ್ಯದ ಹೆಗ್ಗುರುತು. ಶುಚಿ ಮತ್ತು ರುಚಿ ಎರಡಕ್ಕೂ ಮಯೂರ ದಿ ಬೆಸ್ಟ್. ಅಲ್ಲಿನ ಸಿಬ್ಬಂದಿಯೂ ನಿಮ್ಮನ್ನು ಆತ್ಮೀಯವಾಗಿ ಉಪಚರಿಸುತ್ತಾರೆ.
ಇವುಗಳ ಜತೆಗೆ ನಿಮಗೆ ವಿಶ್ವ ಪ್ರಸಿದ್ಧ ಪಾರಂಪರಿಕ ತಾಣ ಹಂಪಿಯ ಸಾಂಗತ್ಯ ಸಿಕ್ಕರೆ ಹೇಗಿರುತ್ತದೆ? ಹೌದು, ಇಂತಹದ್ದೊಂದು ಅವಕಾಶ ಹಂಪಿಯ ಬಳಿ ಇರುವ ಮಯೂರ ಭುವನೇಶ್ವರಿ ಕಮಲಾಪುರದಲ್ಲಿದೆ. ಇಂಥ ತಾಣದಲ್ಲಿ ವಾಸ್ತವ್ಯ ಹೂಡಿರುವ ಏಕೈಕ ಹೊಟೇಲ್ ಇದು. ನೀವಲ್ಲಿ ಉಳಿಯುವ ಅಷ್ಟು ಘಳಿಗೆಯೂ ರಾಜರಂತೆ ನೋಡಿಕೊಳ್ಳುತ್ತಾರೆ. ಅಂದರೆ ಆತಿಥ್ಯ ಅಷ್ಟು ಅಚ್ಚುಕಟ್ಟಾಗಿರುತ್ತದೆ. ಇತಿಹಾಸ ನಿಬ್ಬೆರಗಾಗಿ ನೋಡುವಂತೆ ಮಾಡಿದ ವಿಜಯನಗರವನ್ನು, ಮತ್ತದೇ ಬೆರಗುಗಣ್ಣುಗಳಿಂದ ನೀವೂ ನೋಡಬಹುದು. ಹಂಪಿಯ ವಿಳಾಸ ನಿಮಗೆ ಹೇಳುವ ಅವಶ್ಯಕತೆಯಿಲ್ಲ. ಅಲ್ಲಿಗೆ ಹೋದಾಗ ಹೊಟೇಲ್ ಮಯೂರಕ್ಕೆ ನೀವೂ ಹೀಗೆ ಹೋದರಾಯಿತು. ಹೊಟೇಲ್ ಮಯೂರ ಭುವನೇಶ್ವರಿ, ಕಮಲಾಪುರದಲ್ಲಿದೆ. ಬಸ್ ನಿಲ್ದಾಣದಿಂದ ಕೇವಲ ಒಂದು ಕಿಮೀ ದೂರದಲ್ಲಿದೆ. ಈ ಸುಂದರ ಹೊಟೇಲ್‌ನಲ್ಲಿ ಸೂಟ್, ಡಿಲಕ್ಸ್ ಮತ್ತು ಸೆಮಿ-ಡಿಲಕ್ಸ್ ವಸತಿ ಮತ್ತು 5 ಡಾರ್ಮಿಟರಿಗಳ ಆಯ್ಕೆಯೊಂದಿಗೆ 36 ಹವಾ ನಿಯಂತ್ರಿತ ರೂಮ್‌ಗಳು ಇವೆ. ಮನೆಯಲ್ಲಿ ಕೂತಿದ್ದರೆ ಕೂತೇ ಇರುತ್ತೀರಿ. ಆದರೆ ಇಲ್ಲಿಗೆ ಬಂದರೆ ಸ್ಥಳೀಯ ಸೇರಿ ಭಾರತೀಯ ವಿವಿಧ ಖಾದ್ಯಗಳನ್ನು ಸವಿಯಬಹುದು. ಹಂಪಿಯನ್ನು ಸುತ್ತಲು ಮಾರ್ಗದರ್ಶಿಗಳನ್ನು ಮಯೂರ ನಿಮಗೆ ನೀಡುತ್ತದೆ. ಮನೆಯಲ್ಲಿ ಸಿಗುವ ವಾತಾವರಣ ಹೊಟೇಲ್ ಮಯೂರದಲ್ಲಿಯೂ ಸಿಗುತ್ತದೆ. ಆದರೆ ಅಲ್ಲಿನ ವಾತಾವರಣ ಹಿತವಾಗಿರುತ್ತದೆ. ಹೊಸತನವೂ ಇರುತ್ತದೆ. ಉಳಿದುಕೊಳ್ಳೋದಕ್ಕೇನು ಎಲ್ಲಿ ಬೇಕಾದರೂ ಉಳಿದುಕೊಳ್ಳಬಹುದು ಎನ್ನಬೇಡಿ. ಕೆಲವೊಮ್ಮೆ ಸ್ಟೇಯಿಂಗ್ ಕೂಡ ಒಳ್ಳೆಯ ವೈಬ್ ಕೊಡುತ್ತದೆ.