Friday, October 3, 2025
Friday, October 3, 2025

ಈ ದೇಶದಲ್ಲಿ ಒಂದು ಆಸ್ಪತ್ರೆಯೂ ಇಲ್ಲ ಅಂದರೆ ನಂಬಲೇಬೇಕು..!

ಈ ದೇಶದಲ್ಲಿ ಹುಡುಕಿದರೂ ಒಂದೇ ಒಂದು ಆಸ್ಪತ್ರೆಯೂ ಸಿಗಲಾರದು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯೆಂದರೆ ಮನೆಯಲ್ಲೇ ಔಷಧ ತೆಗೆದುಕೊಳ್ಳಬೇಕಷ್ಟೇ.. ಹಾಗಾದರೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಏನು ಗತಿ..?

ಸಾಮಾನ್ಯವಾಗಿ ಒಂದು ಹಳ್ಳಿಯಲ್ಲೇ ಇಂದು ಅಗತ್ಯ ಸೌಕರ್ಯವೆಂಬಂತೆ ಶಾಲೆ, ಆಸ್ಪತ್ರೆಗಳು, ಬ್ಯಾಂಕ್‌ ಸೇರಿದಂತಹ ಮೂಲ ಸೌಲಭ್ಯಗಳು ಒದಗಿಸಲಾಗುತ್ತದೆ. ಇವುಗಳಲ್ಲಿ ಯಾವುದೇ ಒಂದು ಸೌಕರ್ಯವಿಲ್ಲದಿದ್ದರೂ ಇಂದಿನ ಕಾಲದಲ್ಲಿ ಜೀವನ ನಡೆಸುವುದು ಬಹಳ ಕಷ್ಟಕರ. ಆದರೆ ಅತಿ ಮುಖ್ಯವೆನ್ನಿಸಿಕೊಂಡಿರುವ ಆರೋಗ್ಯ ಸುರಕ್ಷತೆಯೇ ಇಲ್ಲದ ದೇಶವೊಂದಿಗೆ ಅಂದರೆ ನೀವು ನಂಬುತ್ತೀರಾ ? ಇಲ್ಲಿ ಅನಾರೋಗ್ಯವೆಂದು ಹೋಗಲು ಒಂದೇ ಒಂದು ಆಸ್ಪತ್ರೆಯೂ ಸಹ ಇಲ್ಲ..ಹೌದು, ಅಂತಹ ಆಸ್ಪತೆಯೇ ಇಲ್ಲದ ದೇಶವಿರುವುದು ಯುರೋಪ್‌ನಲ್ಲಿ.

vatican city

ಯುರೋಪ್‌ನ ಕೇಂದ್ರಬಿಂದು ಮತ್ತು ವಿಶ್ವದ ಅತ್ಯಂತ ಚಿಕ್ಕ ದೇಶ ಎನ್ನಿಸಿಕೊಂಡಿರುವ ವ್ಯಾಟಕನ್ ಸಿಟಿ ಆಸ್ಪತ್ರೆಯೇ ಇಲ್ಲದ ದೇಶ ಎಂಬ ಕುಖ್ಯಾತಿಗೆ ಒಳಗಾಗಿದೆ. ಕ್ರೈಸ್ತ ಧರ್ಮೀಯರ ಪ್ರಮುಖ ನಗರವೆನ್ನಿಸಿಕೊಂಡಿರುವ ವ್ಯಾಟಿಕನ್ ನಗರವು ಪೋಪ್, ಇತರ ಪ್ರಮುಖ ಧಾರ್ಮಿಕ ಮುಖಂಡರು ಮತ್ತು ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪಾದ್ರಿಗಳ ನೆಲೆಯಾಗಿದೆ. ಕ್ಯಾಥೋಲಿಕ್ ಧರ್ಮದ ಮೆಕ್ಕಾ ಎಂದು ಕರೆಯಲ್ಪಡುವ ಈ ವ್ಯಾಟಿಕನ್ ನಗರವು ತನ್ನ ರಾಷ್ಟ್ರೀಯ ಗಡಿಯೊಳಗೆ ಒಂದೇ ಒಂದು ಆಸ್ಪತ್ರೆಯನ್ನು ಹೊಂದಿಲ್ಲ. ಇಲ್ಲಿ ಅಗತ್ಯವಾಗಿ ಆಸ್ಪತ್ರೆಯ ನಿರ್ಮಾಣವಾಗಬೇಕೆಂದು ಸ್ಥಳೀಯರು ಅನೇಕ ಬಾರಿ ಮನವಿ ಸಲ್ಲಿಸಿ, ಒತ್ತಾಯವನ್ನು ಮಾಡಿದರಾದರೂ ಇದಕ್ಕೆ ಯಾರೂ ಸಮ್ಮತಿ ಸೂಚಿಸಿಲ್ಲ.

96 ವರ್ಷಗಳಿಂದೀಚೆ ಇಲ್ಲಿ ಯಾವುದೇ ಮಗು ಜನಿಸಿಲ್ಲ

ಆಶ್ಚರ್ಯವೆನ್ನಿಸಿದರೂ ನಂಬಲೇಬೇಕಿರುವ ವಿಚಾರವೆಂದರೆ, ಈ ಸಣ್ಣ ನಗರ ರಾಜ್ಯದಲ್ಲಿ ಸುಮಾರು 96 ವರ್ಷಗಳಿಂದ ಒಂದೇ ಒಂದು ಮಗುವಿನ ಜನವು ಆಗಿಲ್ಲ ಎಂಬ ಮಾಹಿತಿಯಿದೆ. ವರದಿಗಳ ಪ್ರಕಾರ, ವ್ಯಾಟಿಕನ್ ನಗರವನ್ನು 1929ನೇ ಇಸವಿಯ ಫೆಬ್ರವರಿ 11ರಂದು ಸ್ವಾಯತ್ತ ದೇಶವೆಂದು ಅಧಿಕೃತವಾಗಿ ಘೋಷಿಸಲಾಯ್ತು. ಹೀಗೆ ದೇಶವಾದಾಗಿನಿಂದಲೂ ಈ ನಗರದಲ್ಲಿ ಒಂದೇ ಒಂದು ಮಗು ಜನಿಸಿಲ್ಲವಂತೆ.

agatha-depine-hsNA58fqUMo-unsplash-1024x691

ಆರೋಗ್ಯ ಸಮಸ್ಯೆಗಳಿಗೆ ಪರಿಹಾರವೇನು ?

ಅನಾರೋಗ್ಯವೆಂದರೆ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಸಂಪರ್ಕಿಸುವುದು ಸಾಮಾನ್ಯ ವಿಚಾರ. ಆದರೆ ಇಲ್ಲಿ ಆಸ್ಪತ್ರೆಯೇ ಇಲ್ಲವಾದ್ದರಿಂದ ಅನಾರೋಗ್ಯದ ಸಂದರ್ಭಗಳಲ್ಲಿ ಇಲ್ಲಿನ ನಿವಾಸಿಗರು ಏನು ಮಾಡುತ್ತಾರೆ ಎಂಬುದು ಎಲ್ಲರಲ್ಲಿ ಮೂಡುವ ಪ್ರಶ್ನೆ. ಆದರೆ ಸಮಾಧಾನಕರ ವಿಷಯವೇನು ಗೊತ್ತಾ? ಹೌದು, ವ್ಯಾಟಿಕನ್ ನಗರವು ಇಟಲಿಯ ರಾಜಧಾನಿ ರೋಮ್‌ನ ಮಧ್ಯದಲ್ಲಿದೆ ಮತ್ತು ಯಾರಿಗಾದರೂ ಆಸ್ಪತ್ರೆ, ಆರೈಕೆಯ ಅಗತ್ಯವಿರುವ ಪರಿಸ್ಥಿತಿ ಬಂದಾಗಲೆಲ್ಲಾ ಅವರನ್ನು ರೋಮ್‌ಗೆ ಕರೆದೊಯ್ಯಲಾಗುತ್ತದೆ.

ಅದೇನೇ ಇದ್ದರೂ ದೇಶ ಅಂದ ಮೇಲೆ ಪ್ರಜೆಗಳ ಸುರಕ್ಷತೆಯ ದೃಷ್ಟಿಯಿಂದ ಇಂತಹ ಅಗತ್ಯ ಸೌಕರ್ಯಗಳನ್ನು ಒದಗಿಸಲೇ ಬೇಕು ಅಲ್ವಾ? ಪ್ರಜೆಗಳು ಆರೋಗ್ಯವಾಗಿದ್ದರಷ್ಟೇ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಇವರು ಯಾಕೆ ಅರ್ಥಮಾಡಿಕೊಳ್ತಿಲ್ಲ ಎಂದು ಖುದ್ದು ವ್ಯಾಟಕನ್ ಸಿಟಿ ನಿವಾಸಿಗರೇ ಮಾತನಾಡಿಕೊಳ್ಳುವಂತಾಗಿರುವುದು ಮಾತ್ರ ಸುಳ್ಳಲ್ಲ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!