Monday, August 18, 2025
Monday, August 18, 2025

ಈ ಪುಟ್ಟ ದೇಶ ಪ್ರವಾಸಿಗರಿಗೆ ಅಚ್ಚುಮೆಚ್ಚು !

ಅತಿ ಕಡಿಮೆ ಜನಸಂಖ್ಯೆ ಇರುವ ದೇಶಗಳಲ್ಲಿ ಉತ್ತರ ಐರ್ಲೆಂಡ್ ದ್ವೀಪ ರಾಷ್ಟ್ರವೂ ಒಂದು. ಇಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ;ಪ್ರವಾಸಿಗರಿಗೆ ಇದು ಸುರಕ್ಷಿತ ಪ್ರದೇಶ.  -ಮೋಹನ ಭಟ್ಟ, ಅಗಸೂರು

ಉತ್ತರ ಐರ್ಲೆಂಡ್ ದ್ವೀಪ ರಾಷ್ಟ್ರ ಬಹು ವ್ವೈವಿದ್ಯತೆಗಳಿಂದ ಕೂಡಿದೆ. ಇಲ್ಲಿಗೆ  ಹೋಗಲು ಯು.ಕೆ.ಗೆ ಹೋಗುವ ವಿಸಾ ಇದ್ದರೆ ಅನುಕೂಲ, ಪ್ರತ್ಯೇಕ ವಿಸಾ ಬೇಕಾಗಿಲ್ಲ. ಎರಡೇ ದಿನಗಳಲ್ಲಿ ಪೂರ್ತಿ ನೋಡಿ ಇಂಗ್ಲೆಂಡ್ ಗೆ ವಾಪಸಾಗಬಹುದು. ಇದರಿಂದಾಗಿಯೇ ವಾರಾಂತ್ಯದಲ್ಲಿ ಹೆಚ್ಚುವರಿ ರಜೆ ಬಂದರೆ  ಪ್ರವಾಸಿಗರ ಪ್ರವಾಹ ಸಾಮಾನ್ಯ.

ಎಲ್ಲ ಯುರೋಪಿಯನ್ ರಾಷ್ಟ್ರಗಳಂತೆಯೇ ಇಲ್ಲಿಯೂ ಚರ್ಚ್ , ಕ್ಯಾಸೆಲ್ಗಳು ಇವೆ. ಆದರೆ ಶತಮಾನಗಳ ಹಿಂದಿನ ಕಬ್ಬಿಣದ ಯುಗದಲ್ಲಿ ಕಟ್ಟಿದ ಇಲ್ಲಿಯ ಕೋಟೆ ಕೊತ್ತಳಗಳು ಇಂದಿಗೂ ಕತೆ ಹೇಳುತ್ತಿವೆ. ಜನರು ಇವಕ್ಕೆಲ್ಲ ಇಟ್ಟರುವ ಹೆಸರುಗಳು ವಿಚಿತ್ರವಾಗಿವೆ. ಪೋಕ್ಸ್ ಕ್ಯಾಸಲ್, ಗೋಸ್ಟ್ ಫೋರ್ಟ್ ಇತ್ಯಾದಿ. ಪುರಾತನ  ಬಂದರುಗಳು ಕಡಲ ಕೊರೆತಕ್ಕೆ ಒಳಗಾಗಿ ಕತ್ತರಿಸಿದಂತೆ ತುಂಡು ತುಂಡಾಗಿ ಶೇಖರಣೆಯಾಗಿವೆ. ಕೋಟೆಗಳ ಕಲ್ಲುಗಳು ಬಿದ್ದು ಸುರಕ್ಷತೆಗೆ ತೊಂದರೆಯಾಗಿವೆ.  ನೋಡುತ್ತ ಹೋದಂತೆ ಇತಿಹಾಸದ ಪುಟಗಳು ತೆರೆದುಕೊಳ್ಳುತ್ತವೆ. ಈ ದ್ವೀಪ ಐರಿಶ್ ಕಡಲು ಕಾಲುವೆಗೆ ಹೊಂದಿಕೊಂಡಿದೆ ನಂತರ ಅಟ್ಲಾಂಟಿಕ್ ಮಹಾಸಾಗರಕ್ಕೆ ಕೂಡುವದು.

ನಾಲ್ಕು ಚಿನ್ನದ ಪದಕ !

ಬೆಲ್‌ಫಾಸ್ಟ್‌ ರಾಜಧಾನಿಯಾಗಿರುವ ಈ ದೇಶದಲ್ಲಿ ಅನೇಕ ವರ್ಷಗಳ ಹಿಂದೆ ಕ್ಯಾಥೊಲಿಕ್ ಹಾಗೂ ಪ್ರೊಟೆಸ್ಟಂಟ್ ರ ನಡುವೆ ಉಂಟಾದ ವಿವಾದವೇ ಐರ್ಲೆಂಡ್ 1921ರಲ್ಲಿ ಇಬ್ಬಾಗವಾಗಲು ಕಾರಣ. ಬ್ರಿಟಿಷ್ ಕಾನೂನುಗಳೇ ಇಲ್ಲಿವೆ.  ಇಂಗ್ಲೆಂಡ್ ಅದಿಪತಿಗಳಲ್ಲಿಯೇ ಉತ್ತರ ಐರ್ಲೆಂಡ್ ನ ಚಾವಿ ಇದೆ. ನಿಯಂತ್ರಣವೂ ಅಲ್ಲಿಂದಲೇ ಇದರಿಂದಾಗಿಯೇ ಈಗಲೂ ಪ್ರತ್ಯೇಕ  ಸ್ವತಂತ್ರ ರಾಷ್ಟ್ರವಾಗಬೇಕೆಂಬ ಒಲವೂ ಜನರಲ್ಲಿ ಇದೆ. ಇಲ್ಲಿಯ ಪುಟ್ ಬಾಲ್  ಟೀಮು ಬಲಿಷ್ಠವಾಗಿದೆ. ವಿವಿಧ ಕ್ರೀಡೆಗಳ ನಲವತ್ತು ಟೀಮ್ ಗಳು ಈ ದೇಶದಲ್ಲಿದೆ. ಕಳೆದ ಓಲಂಪಿಕ್ ಕ್ರೀಡಾ ಕೂಟದಲ್ಲಿ ಪ್ರತ್ಯೇಕ ವಾಗಿ ಸ್ಪರ್ಧಿಸಿದ್ದ ಉತ್ತರ ಐರ್ಲೆಂಡ್ ನಾಲ್ಕು ಸ್ವರ್ಣ ಪದಕ ಪಡೆದು ವಿಶ್ವಗಮನ ಸೆಳೆದಿದೆ.

ಇಪ್ಪತ್ತು ಲಕ್ಷ ಒಳಗೆ ಜನಸಂಖ್ಯೆ ಇರುವ ಉತ್ತರ ಐರ್ಲೆಂಡ್ ನಲ್ಲಿ ಏಶಿಯಾ, ವರ್ಣೀಯ ರಾಷ್ಟ, ಮುಸ್ಲಿಮ್  ಹಾಗೂ ಇತರ ರಾಷ್ಟ್ರಗಳ ಜನರು ಉದ್ಯೋಗಕ್ಕೆ ಬಂದವರು ನೆಲೆಯೂರಿದ್ದಾರೆ.  ಭಾರತೀಯರು ಹತ್ತು ಸಾವಿರಕ್ಕೂ ಕಡಿಮೆ ಇದ್ದಾರೆ. 

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!