Saturday, December 13, 2025
Saturday, December 13, 2025

ರೌಲಾನೆ ಮುಖವಾಡಗಳ ಆಚರಣೆ!

ನಮ್ಮಲ್ಲಿ ಭೂತ ಕೋಲದ ರೀತಿಯಲ್ಲೇ, ಪಹಾಡಿಗಳು ಸೌನಿ ಎಂಬ ಭೂತ ಅವರ ಮನೆ, ಜೀವ, ಕುಟುಂಬವನ್ನು ಚಳಿಗಾಲದಲ್ಲಿ ಕಾಪಾಡುತ್ತದೆ ಎಂದು ನಂಬುತ್ತಾರೆ. ಈ ಹಬ್ಬ ಆ ಸೌನಿಗಾಗಿಯೇ! ಈ ಆಚರಣೆ 5000 ವರ್ಷಗಳಿಗಿಂತಲೂ ಹಳೆಯದು ಎಂದು ನಂಬಲಾಗಿದೆ. ಇದು ಕತೆಗಳಿಂದ, ಪೀಳಿಗೆಗಳಿಂದ, ಹಾಡುಗಳಿಂದ ಬೆಳೆದುಬಂದ ಹಬ್ಬ. ಸಮುದಾಯಗಳು ಸಂಭ್ರಮಕ್ಕಾಗಿ ಸೇರಿಕೊಳ್ಳುವುದೇ ಹಬ್ಬ ಅನ್ನುವುದಾದರೆ ಈ ಪ್ರಾಚೀನ ಆಚರಣೆಯು ಒಂದು ಹಬ್ಬವೇ.

ಭಾರತೀಯರಿಗೆ ಹಬ್ಬಗಳು ಹೊಸದಲ್ಲ. ತಿಂಗಳಲ್ಲಿ 3-4 ಹಬ್ಬವಂತೂ ಬಂದು ಹೋಗುತ್ತದೆ. ಕೆಲವು ಹಬ್ಬಗಳನ್ನು ನಾವು ಆಚರಿಸಿದರೆ, ಇನ್ನೂ ಕೆಲವನ್ನು ಬೇರೆ ಯಾರೋ ಆಚರಿಸುತ್ತಾರೆ. ಅಷ್ಟೊಂದು ಹಬ್ಬಗಳಲ್ಲಿ ಕೆಲವು ಹಬ್ಬಗಳನ್ನು ಮಾತ್ರ ದೇಶಾದ್ಯಂತ ಆಚರಿಸುತ್ತೇವೆ. ಕೆಲವೊಮ್ಮೆ ಗೊತ್ತಿಲ್ಲದ ಹಬ್ಬ -ಆಚರಣೆಗಳು ಒಮ್ಮೆಲೇ ಮುನ್ನೆಲೆಗೆ ಬಂದಾಗ ಸೋಷಿಯಲ್‌ ಮೀಡಿಯಾಗಳಲ್ಲಿ ಹೆವಿ ಫೇಮಸ್‌ ಆಗಿ, ಎಷ್ಟೋ ಜನರ ಮಾತುಗಳಲ್ಲಿ ಸ್ಥಾನವನ್ನು ಪಡೆಯುತ್ತವೆ.

ಇಲ್ಲಿ ಅಂಥದ್ದೇ ಆಚರಣೆಯ ಬಗ್ಗೆ ಚರ್ಚಿಸುತ್ತಿದ್ದೇವೆ. ಈ ಹಬ್ಬ 5000 ವರ್ಷಗಳ ಹಿಂದಿನದ್ದು. ಹಿಮಾಚಲ ಪ್ರದೇಶದಲ್ಲಿ ಕಿನೌರ್‌ ಎಂಬ ಜಿಲ್ಲೆಯಲ್ಲಿ ಚಳಿಗಾಲ ಕಳೆಯುತ್ತ, ಸೂರ್ಯನ ಕಿರಣಗಳು ತೋಟ-ಮನೆಯನ್ನು ಆವರಿಸಲು ಶುರುವಾದಾಗ, ಯಾವುದೇ ಸದ್ದು ಗದ್ದಲವಿಲ್ಲದೇ ಇವರಿಗೆಲ್ಲ ಒಂದು ಆಚರಣೆ ಶುರುವಾಗುತ್ತದೆ. ತಮ್ಮನ್ನು ದಪ್ಪ ಉಣ್ಣೆಯಲ್ಲಿ ಸುತ್ತಿಕೊಂಡು, ಹಲವಾರು ಶತಕಗಳ ಹಿಂದಿನ ಪ್ರಾಚೀನ ಆಚರಣೆಗೆ ಸಜ್ಜಾಗುತ್ತಾರೆ. ಈ ಆಚರಣೆಗೆ ಸರಿಯಾದ ದಿನ ಅಂತ ಇಲ್ಲ. ಚಳಿಗಾಲ ಮುಗಿಯುತ್ತಲೇ ಆಚರಿಸಲು ಸಿದ್ಧ. ವಸಂತಕ್ಕೂ ಮೊದಲೂ ಆಚರಿಸಬಹುದಾದ ಹಬ್ಬವಿದು. ಅಂದ ಹಾಗೆ ಈ ಆಚರಣೆಯ ಹೆಸರು ರೌಲಾನೆ!

Himachal pradesh raunale festival

ಬೀಳ್ಕೊಡುಗೆ ಸಮಾರಂಭ

ನಮ್ಮಲ್ಲಿ ಭೂತ ಕೋಲದ ರೀತಿಯಲ್ಲೇ, ಪಹಾಡಿಗಳು ಸೌನಿ ಎಂಬ ಭೂತ ಅವರ ಮನೆ, ಜೀವ, ಕುಟುಂಬವನ್ನು ಚಳಿಗಾಲದಲ್ಲಿ ಕಾಪಾಡುತ್ತದೆ ಎಂದು ನಂಬುತ್ತಾರೆ. ಈ ಹಬ್ಬ ಆ ಸೌನಿಗಾಗಿಯೇ! ಈ ಆಚರಣೆ 5000 ವರ್ಷಗಳಿಗಿಂತಲೂ ಹಳೆಯದು ಎಂದು ನಂಬಲಾಗಿದೆ. ಇದು ಕತೆಗಳಿಂದ, ಪೀಳಿಗೆಗಳಿಂದ, ಹಾಡುಗಳಿಂದ ಬೆಳೆದುಬಂದ ಹಬ್ಬ. ಸಮುದಾಯಗಳು ಸಂಭ್ರಮಕ್ಕಾಗಿ ಸೇರಿಕೊಳ್ಳುವುದೇ ಹಬ್ಬ ಅನ್ನುವುದಾದರೆ ಈ ಪ್ರಾಚೀನ ಆಚರಣೆಯು ಒಂದು ಹಬ್ಬವೇ.

ಸೌನಿ ಬಗ್ಗೆಯೂ ಕತೆ

ಕೆಲವೊಂದಿಷ್ಟು ಹಳ್ಳಿಗಳ ಪ್ರಕಾರ ಸೌನಿ ಅಂದರೆ ಪ್ರಕಾಶಮಾನವಾದ ಆತ್ಮ. ಅದು ಹುಲ್ಲುಗಾವಲು ಮತ್ತು ಹಿಮಾಚ್ಛಾದಿತ ಬಂಡೆಗಳ ಮೇಲೆ ಹಾರುತ್ತಾ, ಅಲ್ಲಿನ ಜನರನ್ನು, ಕುರುಬರನ್ನು ಮತ್ತು ಪ್ರಯಾಣಿಕರನ್ನು ರಕ್ಷಿಸುತ್ತದೆ. ಇನ್ನೂ ಕೆಲವರ ಪ್ರಕಾರ ಸೌನಿ ಅಂದರೆ ಪೂರ್ವಜರ ಆತ್ಮ. ಅದು ಚಳಿಗಾಲದ ಸಮಯದಲ್ಲಿ ಆಗುವ ಅನಾಹುತಗಳಿಂದ ಜನರನ್ನು ರಕ್ಷಿಸುತ್ತದೆ.

Raunale festival

ಆಚರಣೆಯ ಬಗ್ಗೆ

ಈ ಆಚರಣೆಯ ಪ್ರಮುಖ ಭಾಗದಲ್ಲಿ ರೌಲಾ, ರೌಲಾನೆ ಎಂಬ ವೇಷದಲ್ಲಿ ಹಳ್ಳಿಯ ಯುವಕರು ಸಿದ್ಧಗೊಳ್ಳುತ್ತಾರೆ. ಅವರು ದೈವಿಕ ದಂಪತಿಗಳಂತೆ, ಮರದಿಂದ ಕೆತ್ತಿದ ಮುಖವಾಡಗಳನ್ನು ಧರಿಸಿ, ಭಾರವಾದ ಕಿನ್ನೌರಿ ಉಣ್ಣೆ ಮತ್ತು ಬೆಳ್ಳಿಯ ಆಭರಣಗಳನ್ನು ಧರಿಸಿಕೊಳ್ಳುತ್ತಾರೆ. ಅವರು ಈ ವಸ್ತ್ರಗಳನ್ನು ಧರಿಸಿದ್ದಾಗ ಯಾರ ಜತೆಯೂ ಮಾತನಾಡಲ್ಲ. ತುಂಬಾ ಸಾವಕಾಶವಾಗಿ ಹೋಗುವುದು, ಅಲ್ಲಲ್ಲಿ ನಿಲ್ಲುವುದು ಮಾಡುತ್ತಾರೆ. ಅವರ ಮುಂದೆ ಮೆರವಣಿಗೆ, ನೃತ್ಯ, ಜನಪದ ಸಂಗೀತಗಳೆಲ್ಲ ನಡೆಯುತ್ತಿರುತ್ತದೆ.

Raunale fest

ಪ್ರವಾಸಿಗರಿಗೂ ರೌಲಾನೆ

ಇದು ತುಂಬಾ ರಿಮೋಟ್‌ ಹಳ್ಳಿಗಳಲ್ಲಿ ನಡೆಯುತ್ತದೆ. ಶಿಮ್ಲಾ ಅಥವಾ ಚಂಡೀಗಢದಿಂದ ಕಿನ್ನೌರ್‌ಗೆ ತಲುಪಬೇಕು. ಪ್ರವಾಸಿಗರಿಗೆ ಇಲ್ಲಿಗೆ ಹೋಗಲು ಪೂರ್ಣ ಅನುಮತಿಯಿದ್ದು, ಅಲ್ಲಿಗೆ ಹೋಗುವ ಮೊದಲು ಹೋಮ್‌ ಸ್ಟೇಗಳನ್ನು ಬುಕ್‌ ಮಾಡಬೇಕು. ಈ ಹಬ್ಬಕ್ಕೆ ಸರಿಯಾದ ಸಮಯ ನಿಗದಿಯಾಗಿರದ ಕಾರಣ, ಹೋಮ್‌ ಸ್ಟೇ ಮಾಲೀಕರ ಹತ್ತಿರವೇ ಇದರ ಬಗ್ಗೆ ವಿಚಾರಿಸುವುದು ಉತ್ತಮ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!