Monday, August 18, 2025
Monday, August 18, 2025

ಇಂದು ಅಂತಾರಾಷ್ಟ್ರೀಯ ಕೋಲಾ ದಿನ: ಈ ದಿನದ ಬಗ್ಗೆ ನಿಮಗೆಷ್ಟು ಗೊತ್ತು?

ವೊಂಬಾಟ್ ತಳಿಗೆ ಸೇರಿದ ಕೋಲಾಗಳು ಮುಖ್ಯವಾಗಿ ಆಸ್ಟ್ರೇಲಿಯಾದ ದೂರದ ಭಾಗಗಳಲ್ಲಿ ಕಂಡುಬರುತ್ತವೆ. ಅವುಗಳ ದೊಡ್ಡ ತಲೆಗಳು, ತುಪ್ಪಳದಂತೆ ಇರುವ ಕಿವಿಗಳು ಮತ್ತು ಬಾಲವಿಲ್ಲದ ದೇಹವನ್ನು ಹೊಂದಿದೆ. ಕೋಲಾಗಳನ್ನು ಆಸ್ಟ್ರೇಲಿಯಾದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಇಂದು(ಮೇ 3) ಅಂತಾರಾಷ್ಟ್ರೀಯ ಕೋಲಾ ದಿನ. ಸಾಮಾನ್ಯವಾಗಿ ಜಗತ್ತಿನಲ್ಲಿ ಹಲವು ಪ್ರಾಣಿ ಪಕ್ಷಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅದರಲ್ಲೂ ಅಪರೂಪದ ತಳಿಯ ಪ್ರಾಣಿಗಳಿದ್ದರೆ ಅವುಗಳ ಮಹತ್ವವನ್ನು ಎಲ್ಲರಿಗೂ ತಿಳಿಸುವ ಸಲುವಾಗಿಯೇ ದಿನಾಚರಣೆಯನ್ನು ಗೊತ್ತು ಮಾಡಲಾಗುತ್ತದೆ. ಅಂತೆಯೇ ಪ್ರತಿ ವರ್ಷ ಮೇ 3 ರಂದು ಅಂತಾರಾಷ್ಟ್ರೀಯ ಕೋಲಾ ದಿನವನ್ನು ಆಚರಿಸಲಾಗುತ್ತದೆ. ನಮ್ಮಲ್ಲಿ ಹೆಚ್ಚಿನವರಿಗೆ ಈ ದಿನದ ಬಗ್ಗೆ ಮಾಹಿತಿಯಿಲ್ಲ. ಕೋಲಾ ಪ್ರಾಣಿಯ ವಿಶೇಷತೆ ಏನು? ಕೋಲಾ ದಿನವನ್ನು ಯಾಕೆ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ.

ವೊಂಬಾಟ್ ತಳಿಗೆ ಸೇರಿದ ಕೋಲಾಗಳು ಮುಖ್ಯವಾಗಿ ಆಸ್ಟ್ರೇಲಿಯಾದ ದೂರದ ಭಾಗಗಳಲ್ಲಿ ಕಂಡುಬರುತ್ತವೆ. ಅವುಗಳ ದೊಡ್ಡ ತಲೆಗಳು, ತುಪ್ಪಳದಂತೆ ಇರುವ ಕಿವಿಗಳು ಮತ್ತು ಬಾಲವಿಲ್ಲದ ದೇಹವನ್ನು ಹೊಂದಿದೆ. ಕೋಲಾಗಳನ್ನು ಆಸ್ಟ್ರೇಲಿಯಾದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇತ್ತೀಚೆಗಂತೂ ಕೋಲಾಗಳ ಸಂತತಿ ನಾಶವಾಗುತ್ತಿದೆ. ಕಾಡ್ಗಿಚ್ಚುಗಳು ಮತ್ತು ಅರಣ್ಯ ನಾಶದಿಂದಾಗಿ ಕಳೆದ ಹತ್ತು ವರ್ಷಗಳಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ಕೋಲಾಗಳು ಅಳಿದಿವೆ. ಅಂತಾರಾಷ್ಟ್ರೀಯ ಕಾಡು ಕೋಲಾ ದಿನವು ಈ ಪ್ರಾಣಿಯ ಮಹತ್ವವನ್ನು ತಿಳಿಸಿಕೊಡುತ್ತದೆ. ಅವುಗಳ ಉಳಿವಿಗಾಗಿ ಹೋರಾಡಲೆಂದೇ ಈ ದಿನವನ್ನು ಆಚರಿಸಲಾಗುತ್ತದೆ.

ಕೋಲಾ ದಿನದ ಇತಿಹಾಸ
ಅಂತಾರಾಷ್ಟ್ರೀಯ ಕಾಡು ಕೋಲಾ ದಿನವನ್ನು ಆಸ್ಟ್ರೇಲಿಯಾ ದೇಶವು ಪರಿಚಯಿಸಿದೆ. ಈ ದಿನದಂದು ಪರಿಸರವಾದಿಗಳು, ವನ್ಯಜೀವಿ ಕಾರ್ಯಕರ್ತರು ಕೋಲಾಗಳ ರಕ್ಷಣೆ ಮತ್ತು ಅವುಗಳು ವಾಸಿಸುವ ಜಾಗಗಳ ಸಂರಕ್ಷಣೆಗಾಗಿ ಆಂದೋಲನದಲ್ಲಿ ಒಟ್ಟುಗೂಡುತ್ತಾರೆ. ಅವು ಆಸ್ಟ್ರೇಲಿಯಾಕ್ಕೆ ಮಾತ್ರ ಸೇರಿದ ವಿಶಿಷ್ಟವಾದ ತಳಿಯಾಗಿದ್ದರೂ ಅವುಗಳನ್ನು ಉಳಿಸುವ ಕೆಲಸವು ಜಾಗತಿಕವಾಗಿರಬೇಕು. ಪರಿಸರವಾದಿಗಳ ತಂಡವು ಕೋಲಾಗಳ ಸಹಾಯಕ್ಕೆ ಬರಲು ಇಡೀ ಜಗತ್ತಿಗೆ ಮನವಿ ಮಾಡುತ್ತದೆ. ಆಸ್ಟ್ರೇಲಿಯನ್ನರು ಮರಗಳನ್ನು ನೆಡುವ ಮೂಲಕ, ಜಾಗತಿಕ ತಾಪಮಾನ ಏರಿಕೆಯನ್ನು ಎದುರಿಸುವ ಮಾರ್ಗಗಳನ್ನು ಕಾರ್ಯಗತಗೊಳಿಸುವ ಮೂಲಕ, ಗಮ್ ಲೀಫ್ ಟೀ ಶರ್ಟ್‌ಗಳನ್ನು ಧರಿಸುವ ಮೂಲಕ ಮತ್ತು ಕೋಲಾಗಳ ವಿಶಿಷ್ಟ ಲಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ.

Koala Day

ಹವಾಮಾನ ಬದಲಾವಣೆಯಿಂದಾಗಿ ಕೋಲಾಗಳು ಅತ್ಯಂತ ಅಪಾಯದಲ್ಲಿರುವ ಪ್ರಭೇದಗಳಲ್ಲಿ ಒಂದಾಗಿದೆ. ಜಾಗತಿಕ ತಾಪಮಾನದಲ್ಲಿ ಎರಡು ಡಿಗ್ರಿ ಹೆಚ್ಚಳವು ಕೋಲಾಗಳಿಗೆ ದುರಂತವಾಗಲಿದೆ. 2020 ರ ಕಾಡ್ಗಿಚ್ಚುಗಳು ಕೋಲಾಗಳನ್ನು ನಾಶಗೊಳಿಸಿದವು. ಇದು ಲಕ್ಷಾಂತರ ಕೋಲಾಗಳ ಮೇಲೆ ಪರಿಣಾಮ ಬೀರಿತು. ಅಂತಾರಾಷ್ಟ್ರೀಯ ಕಾಡು ಕೋಲಾ ದಿನವು ಕೋಲಾಗಳ ಉಳಿವಿಗೆ ಅಪಾಯವನ್ನುಂಟುಮಾಡುವ ಗಂಭೀರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಕೋಲಾಗಳು ದಟ್ಟವಾದ ನೀಲಗಿರಿ ಕಾಡುಗಳಲ್ಲಿ ಮಾತ್ರ ಬದುಕಬಲ್ಲವು.

ವಾರ್ಷಿಕ ವೀಕ್ಷಣೆಯು ಜನರನ್ನು ಒಟ್ಟುಗೂಡಿಸುತ್ತದೆ, ಏಕೆಂದರೆ ಅವರು ಈ ಸುಂದರ ಜಾತಿಯ ಬಗ್ಗೆ ತಮ್ಮ ಪ್ರೀತಿ ಮತ್ತು ಮೆಚ್ಚುಗೆಯನ್ನು ಹಂಚಿಕೊಳ್ಳುತ್ತಾರೆ. ಕೋಲಾಗಳು ಬೆಚ್ಚಗಿನ, ಸ್ನೇಹಪರ ಮತ್ತು ಅತ್ಯಂತ ಆಹ್ಲಾದಕರವಾಗಿವೆ. ಅವು 25 ಮಿಲಿಯನ್ ವರ್ಷಗಳಿಗೂ ಹೆಚ್ಚು ಕಾಲ ಈ ಗ್ರಹದ ಭಾಗವಾಗಿವೆ. ನಮ್ಮ ಕಣ್ಗಾವಲಿನಲ್ಲಿ ಅವು ಅಳಿವಿನಂಚಿಗೆ ಹೋಗಲು ಅರ್ಹವಲ್ಲ. ಈ ಆಚರಣೆಯು ನಮ್ಮ ಆದ್ಯತೆಗಳನ್ನು ಮರುಕಳಿಸಲು ಮತ್ತು ಅವುಗಳ ಅಸ್ತಿತ್ವಕ್ಕೆ ಬೆದರಿಕೆ ಹಾಕುವ ಸಮಸ್ಯೆಗಳ ವಿರುದ್ಧದ ನಮ್ಮ ಹೋರಾಟದಲ್ಲಿ ನಮ್ಮ ಸಂಪನ್ಮೂಲಗಳನ್ನು ತೊಡಗಿಸಿಕೊಳ್ಳಲು ನಮಗೆ ಅವಕಾಶವನ್ನು ನೀಡುತ್ತದೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಉತ್ತರ ಕರ್ನಾಟಕದ ರಂಗನತಿಟ್ಟು...

Read Next

ಉತ್ತರ ಕರ್ನಾಟಕದ ರಂಗನತಿಟ್ಟು...