Friday, October 3, 2025
Friday, October 3, 2025

14 ದೇಶಗಳಲ್ಲಿ ವ್ಯಾಪಿಸಿರುವ ಪ್ಯಾನ್-ಅಮೆರಿಕನ್ ಹೆದ್ದಾರಿ

ಒಂದೇ ಒಂದು ಯು-ಟರ್ನ್ ಇಲ್ಲದೆ 14 ದೇಶಗಳಲ್ಲಿ ವ್ಯಾಪಿಸಿರುವ ಪ್ಯಾನ್-ಅಮೆರಿಕನ್ ಹೆದ್ದಾರಿ ವಿಶ್ವದ ಅತಿ ಉದ್ದದ ನಿರಂತರವಾಗಿ ವಾಹನ ಚಲಾಯಿಸಬಹುದಾದ ರಸ್ತೆಯಾಗಿದೆಯಂತೆ. ಇದು ಅಲಾಸ್ಕಾದ ಪ್ರುಧೋ ಕೊಲ್ಲಿಯಿಂದ ಶುರುವಾಗಿ ಅರ್ಜೆಂಟೀನಾದ ಉಶುವಾಯಾವರೆಗೆ ಸಾಗುತ್ತದೆಯಂತೆ. ಇದರ ನಿರ್ಮಾಣ 1920ರ ದಶಕದಲ್ಲಿ ಶುರುವಾಗಿ 1960ರಲ್ಲಿ ಪೂರ್ಣವಾಗಿದೆಯಂತೆ. ಈ ಮಾರ್ಗವನ್ನು ಕಂಪ್ಲೀಟ್‌ ಆಗಿ ಸುತ್ತಲು ಸುಮಾರು 60 ದಿನಗಳು ಬೇಕಾಗುತ್ತದೆಯಂತೆ.

  • ಪವಿತ್ರ ಶೆಟ್ಟಿ

ಜೂನೋ: ಸಾಮಾನ್ಯವಾಗಿ ರಸ್ತೆಗಳು ಅಲ್ಲಲ್ಲಿ ತಿರುವುಗಳನ್ನು ಹೊಂದಿರುತ್ತವೆ. ಆದರೆ ಇಲ್ಲೊಂದು ರಸ್ತೆ ಮಾತ್ರ ವಿಶೇಷವಾಗಿದೆಯಂತೆ. ಯಾಕೆಂದರೆ ಈ ರಸ್ತೆಯಲ್ಲಿ ತಿರುವುಗಳೇ ಇಲ್ಲವಂತೆ! ಹೌದು ವಿಶ್ವದ ಅತಿ ಉದ್ದದ ರಸ್ತೆ ಒಂದಿದ್ದು, ಆ ರಸ್ತೆಯಲ್ಲಿ ಒಂದೇ ಒಂದು ತಿರುವು ಇಲ್ಲದೆ 14 ದೇಶಗಳನ್ನು ಸಂಪರ್ಕಿಸುವ ಒಂದು ದೊಡ್ಡ ಹೆದ್ದಾರಿ ಎನಿಸಿಕೊಂಡಿದೆಯಂತೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ .ಒಂದೇ ಒಂದು ಯು-ಟರ್ನ್ ಇಲ್ಲದೆ 14 ದೇಶಗಳಲ್ಲಿ ವ್ಯಾಪಿಸಿರುವ ಪ್ಯಾನ್-ಅಮೆರಿಕನ್ ಹೆದ್ದಾರಿ ವಿಶ್ವದ ಅತಿ ಉದ್ದದ, ನಿರಂತರವಾಗಿ ವಾಹನ ಚಲಾಯಿಸಬಹುದಾದ ರಸ್ತೆಯಾಗಿದೆ. ಇದು ಅಲಾಸ್ಕಾದ ಪ್ರುಧೋ ಕೊಲ್ಲಿಯಿಂದ ಶುರುವಾಗಿ ಅರ್ಜೆಂಟೀನಾದ ಉಶುವಾಯಾವರೆಗೆ ಸಾಗುತ್ತದೆಯಂತೆ.

ಇದು ಯಾವ ದೇಶಗಳ ಮೂಲಕ ಹಾದುಹೋಗುತ್ತದೆ

ಪ್ಯಾನ್-ಅಮೆರಿಕನ್ ಹೆದ್ದಾರಿಯು ಅಮೆರಿಕ, ಮೆಕ್ಸಿಕೊ, ಗ್ವಾಟೆಮಾಲಾ, ಎಲ್ ಸಾಲ್ವಡಾರ್, ಹೊಂಡುರಾಸ್, ನಿಕರಾಗುವಾ, ಕೋಸ್ಟರಿಕಾ ಮತ್ತು ಪನಾಮ ಸೇರಿದಂತೆ ಹಲವಾರು ಉತ್ತರ ಅಮೆರಿಕಾದ ರಾಷ್ಟ್ರಗಳ ಮೂಲಕ ಹಾದುಹೋಗುತ್ತದೆಯಂತೆ. ನಂತರ ಅದು ದಕ್ಷಿಣ ಅಮೆರಿಕಾದ ಮೂಲಕ ಕೊಲಂಬಿಯಾ, ಈಕ್ವೆಡಾರ್, ಪೆರು, ಚಿಲಿ ಮತ್ತು ಅರ್ಜೆಂಟೀನಾ ಮೂಲಕ ಹಾದುಹೋಗುತ್ತದೆಯಂತೆ. ಇದು ಕೇವಲ ಅತೀ ಉದ್ದವಾದ ಹೆದ್ದಾರಿಗಳಲ್ಲಿ ಒಂದಾಗಿರುವುದು ಮಾತ್ರವಲ್ಲ ವಿಶ್ವದ ಅತ್ಯಂತ ಸುಂದರ ಹೆದ್ದಾರಿಗಳಲ್ಲಿ ಒಂದಾಗಿದೆಯಂತೆ.

longest straight road in the world

ಎಷ್ಟು ಸಮಯ ಆಗುತ್ತೆ?

ವರದಿಗಳ ಪ್ರಕಾರ, ಈ ಮಾರ್ಗವನ್ನು ಪೂರ್ಣಗೊಳಿಸಲು ಸುಮಾರು 60 ದಿನಗಳು ಬೇಕಾಗುತ್ತದೆಯಂತೆ. ಆದರೆ ಇದು ನೀವು ಪ್ರಯಾಣಿಸುವ ವೇಗದ ಮೇಲೆ ಅವಲಂಬಿತವಾಗಿರುತ್ತದೆ ಎನ್ನಲಾಗಿದೆ. ಅದು ಅಲ್ಲದೇ,ಪ್ರಯಾಣಿಕರು ದಾರಿಯುದ್ದಕ್ಕೂ ಸರಾಗವಾಗಿ ಸಂವಹನ ನಡೆಸಲು ತಕ್ಕಮಟ್ಟಿಗೆ ಸ್ಪ್ಯಾನಿಷ್ ಭಾಷೆಯನ್ನು ತಿಳಿದುಕೊಳ್ಳುವುದು ಒಳ್ಳೆಯದು ಎನ್ನಲಾಗಿದೆ.

ಈ ಹೆದ್ದಾರಿ ನಿರ್ಮಾಣವಾಗಿದ್ದು ಯಾವಾಗ?

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವ ಗುರಿಯೊಂದಿಗೆ 1920 ರ ದಶಕದ ಆರಂಭದಲ್ಲಿ ಪ್ಯಾನ್-ಅಮೇರಿಕನ್ ಹೆದ್ದಾರಿಯ ನಿರ್ಮಾಣವು ಶುರುವಾಯಿತಂತೆ. 1937 ರಲ್ಲಿ, 14 ದೇಶಗಳು ಈ ಸ್ಮಾರಕ ರಸ್ತೆಯನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಒಪ್ಪಂದಕ್ಕೆ ಸಹಿ ಹಾಕಿದ್ದು, 1960 ರ ಹೊತ್ತಿಗೆ, ಇದು ಅಧಿಕೃತವಾಗಿ ಸಾರ್ವಜನಿಕರಿಗೆ ಪ್ರಯಾಣಿಸಲು ಅನುವು ಮಾಡಿಕೊಡಲಾಯಿತಂತೆ.ಇಂದು, ಇದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ವಿಶ್ವ ದಾಖಲೆ ಪಡೆದ ಹೆದ್ದಾರಿಯಾಗಿ ಮಾತ್ರವಲ್ಲದೆ, ಪ್ರಪಂಚದಾದ್ಯಂತದ ಸಾಹಸ ಪ್ರಿಯರಿಗೆ ತಮ್ಮ ಕನಸಿನ ರಸ್ತೆ ಪ್ರವಾಸವನ್ನು ಆನಂದಿಸಲು ಸಹಕಾರಿಯಾಗಿದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!