Monday, August 18, 2025
Monday, August 18, 2025

ಈ ದೇಶಗಳನ್ನು ನೀವು 1 ದಿನದಲ್ಲೇ ಸುತ್ತಬಹುದು! ಪ್ರಪಂಚದ ಅತೀ ಚಿಕ್ಕ ರಾಷ್ಟ್ರಗಳು ಯಾವುದು ಗೊತ್ತೆ? ಇಲ್ಲಿದೆ ಪಟ್ಟಿ

ಒಂದೇ ದಿನದಲ್ಲಿ ಇಡೀ ದೇಶವನ್ನು ಸುತ್ತುವಂತಿದ್ದರೆ ಎಷ್ಟು ಚೆನ್ನಾಗಿರುತ್ತೆ ಅಂತ ನೀವು ಎಂದಾದರೂ ಯೋಚಿಸಿದ್ದೀರಾ..? ಹೌದು, ದೇಶ ಸುತ್ತುವ ಕನಸು ಕಾಣುವ ಮಂದಿ, ಒಂದೇ ದಿನದಲ್ಲಿ ಸುತ್ತಬಹುದಾದ ದೇಶಗಳ ಪಟ್ಟಿ ಇಲ್ಲಿದೆ.

- ರಮೇಶ್‌ ಬಳ್ಳಮೂಲೆ

ಪ್ರಪಂಚದಾದ್ಯಂತ ಸುಮಾರು 195 ದೇಶಗಳಿವೆ. ಈ ಪೈಕಿ ಭಾರತ, ರಷ್ಯಾ, ಚೀನಾದಂತಹ ಕೆಲವು ದೇಶಗಳು ವಿಸ್ತೀರ್ಣದಲ್ಲಿ ಬಹುದೊಡ್ಡದಾಗಿದ್ದರೆ, ಇನ್ನು ಹಲವು ರಾಷ್ಟ್ರಗಳು ನಮ್ಮ ಜಿಲ್ಲೆಗಿಂತಲೂ ಚಿಕ್ಕದಾಗಿವೆ. ಎಷ್ಟೆಂದರೆ ಇಡೀ ದೇಶವನ್ನು 1 ದಿನದಲ್ಲೇ ಸುತ್ತಾಡಬಹುದು. ದೇಶದ ಕಲೆ, ಸಂಸ್ಕೃತಿ, ವಿಶೇಷತೆಗಳು, ಆಹಾರ ಕ್ರಮಗಳು ಹೀಗೆ ಎಲ್ಲವನ್ನೂ ಬರಿಯ ಒಂದೇ ದಿನದಲ್ಲಿ ಕಂಡು, ಅನುಭವಿಸುವ ಅವಕಾಶವೂ ಇದೆ. ಅಂಥ ದೇಶಗಳ ಪಟ್ಟಿ ಹಾಗೂ ಪರಿಚಯ ಇಲ್ಲಿದೆ.

ವ್ಯಾಟಿಕನ್‌ ಸಿಟಿ

ವ್ಯಾಟಿಕನ್‌ ಸಿಟಿ ಪ್ರಪಂಚದ ಅತೀ ಚಿಕ್ಕ ದೇಶ ಎನಿಸಿಕೊಂಡಿದೆ. ಇದರ ವಿಸ್ತೀರ್ಣ ಕೇವಲ 109 ಎಕ್ರೆ. ಇಲ್ಲಿನ ಜನಸಂಖ್ಯೆ 882 ಮಾತ್ರ. ಇದು ರೋಮ್‌ನೊಳಗೆ ಇದ್ದರೂ ಸ್ವತಂತ್ರ ದೇಶ ಎನಿಸಿಕೊಂಡಿದೆ. ವ್ಯಾಟಿಕನ್‌ ಸಿಟಿಯಲ್ಲಿ ಕ್ರೈಸ್ತ ಧರ್ಮಗುರು ಪೋಪ್‌ ನೆಲೆಸಿದ್ದಾರೆ.

ಮೊನಾಕೊ

485 ಎಕ್ರೆ ಹೊಂದಿರುವ ಮೊನಾಕೊ ಎರಡನೇ ಅತೀ ಚಿಕ್ಕ ದೇಶ. ಇದು ಫ್ರೆಂಚ್ ರಿವೇರಿಯಾದಲ್ಲಿದೆ ಮತ್ತು ವಿಶ್ವದ ಅತ್ಯಂತ ಐಷಾರಾಮಿ ತಾಣಗಳಲ್ಲಿ ಒಂದು ಎನಿಸಿಕೊಂಡಿದೆ. ಇಲ್ಲಿ ಪ್ರಸಿದ್ಧ ಕಾರು ರೇಸಿಂಗ್‌ ಮೊನಾಕೊ ಗ್ರ್ಯಾಂಡ್ ಪ್ರಿಕ್ಸ್‌ ನಡೆಯುತ್ತದೆ.

monaco city

ನೌರು

ವಿಶ್ವದ ಅತೀ ಚಿಕ್ಕ ದೇಶಗಳ ಪಟ್ಟಿಯಲ್ಲಿ ನೌರು ಕೂಡ ಸ್ಥಾನ ಪಡೆದುಕೊಂಡಿದೆ. ಇದು 5,189 ಎಕ್ರೆ ವಿಸ್ತೀರ್ಣ ಹೊಂದಿದೆ. ದ್ವೀಪ ರಾಷ್ಟ್ರವಾದ ಇದು ಪೆಸಿಫಿಕ್ ಮಹಾಸಾಗರದಲ್ಲಿದೆ ಮತ್ತು ವಿಶ್ವದಲ್ಲಿ ಅತಿ ಕಡಿಮೆ ಜನರು ಭೇಟಿ ನೀಡುವ ದೇಶಗಳಲ್ಲಿ ಒಂದು. ನೌರುವಿನ ಆಕರ್ಷಣೆಗಳಲ್ಲಿ ಮೋಕ್ವಾ ಗುಹೆಗಳು, ಅನಿಬಾರೆ ಕೊಲ್ಲಿ ಮತ್ತು ಮಧ್ಯ ಪ್ರಸ್ಥಭೂಮಿ ಸೇರಿವೆ. ಈ ಹಿಂದೆ ಇದು ಆಸ್ಟ್ರೇಲಿಯಾದ ಆಡಳಿತಕ್ಕೆ ಒಳಪಟ್ಟಿತ್ತು.

ಟುವಾಲು

ಪೆಸಿಫಿಕ್ ಸಾಗರದ ಪಾಲಿನೇಷ್ಯಾ ಉಪಪ್ರದೇಶದಲ್ಲಿ, ಹವಾಯಿ ಮತ್ತು ಆಸ್ಟ್ರೇಲಿಯಾ ನಡುವೆ ನೆಲೆಸಿರುವ ಟುವಾಲು, ಮೂರು ಹವಳದ ದ್ವೀಪಗಳು ಮತ್ತು ಆರು ಅಟೋಲ್‌ಗಳಿಂದ ಕೂಡಿದೆ. ಇದು ಕೇವಲ 6,212 ಎಕ್ರೆ ವಿಸ್ತೀರ್ಣವನ್ನು ಹೊಂದಿದ್ದು, ವ್ಯಾಟಿಕನ್ ಸಿಟಿ, ಮೊನಾಕೊ ಮತ್ತು ನೌರು ನಂತರ ಜಗತ್ತಿನ 4ನೇ ಅತಿ ಚಿಕ್ಕ ದೇಶ. ಇದರ ರಾಜಧಾನಿ ಫುನಾಫುಟಿ ಸಾಂಪ್ರದಾಯಿಕ ಪಾಲಿನೇಷ್ಯನ್ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಸ್ಫಟಿಕ-ಸ್ಪಷ್ಟವಾದ ಲಗೂನ್‌ಗಳು ಮತ್ತು ಕಡಲತೀರಗಳನ್ನು ಇಷ್ಟಪಡುವವರು ನೀವಾಗಿದ್ದರೆ ಇಲ್ಲಿಗೆ ಭೇಟಿ ನೀಡಬಹುದು.

tuvalu city

ಸ್ಯಾನ್ ಮರಿನೋ

ಸ್ಯಾನ್ ಮರಿನೋ ಇಟಲಿಯೊಳಗೆ ಇದ್ದರೂ ಸ್ವತಂತ್ರ ದೇಶ. ಸ್ಯಾನ್ ಮರಿನೋ ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದು. ದೇಶದ ಒಟ್ಟು ವಿಸ್ತೀರ್ಣ 15,073 ಎಕ್ರೆ.

ಲಿಚ್ಟೆನ್‌ಸ್ಟೈನ್

ಸ್ವಿಟ್ಜರ್‌ಲ್ಯಾಂಡ್‌ ಮತ್ತು ಆಸ್ಟ್ರಿಯಾ ನಡುವೆ ಇರುವ ಲಿಚ್ಟೆನ್‌ಸ್ಟೈನ್ 39,536 ಎಕ್ರೆ ವಿಸ್ತೀರ್ಣ ಹೊಂದಿರುವ ಸುಂದರ ದೇಶ. ರಾಜಧಾನಿ ವಾಡುಜ್ ಬೆರಗುಗೊಳಿಸುವ ಲಿಚ್ಟೆನ್‌ಸ್ಟೈನ್ ಕೋಟೆಯನ್ನು ಹೊಂದಿದೆ. ಇದೇ ವಿಶ್ವದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

lichtenstain city

ಮಾರ್ಷಲ್ ದ್ವೀಪ

ಪೆಸಿಫಿಕ್ ಮಹಾಸಾಗರದಲ್ಲಿರುವ ಮಾರ್ಷಲ್ ದ್ವೀಪ 44,726 ಎಕ್ರೆ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. ಇದು ಹವಳ ದ್ವೀಪ ಮತ್ತು ರೋಮಾಂಚಕ ಸಮುದ್ರ ಸಾಹಸಕ್ಕೆ ಹೆಸರುವಾಸಿ.

ಸೇಂಟ್ ಕಿಟ್ಸ್ ಮತ್ತು ನೆವಿಸ್

ಕೆರಿಬಿಯನ್‌ನಲ್ಲಿರುವ ಈ ದ್ವೀಪ ರಾಷ್ಟ್ರವು ಒಟ್ಟು 64,988 ಎಕ್ರೆ ವಿಸ್ತೀರ್ಣವನ್ನು ಹೊಂದಿದೆ. ಸೇಂಟ್ ಕಿಟ್ಸ್ ಮತ್ತು ನೆವಿಸ್ ಹನಿಮೂನ್ ತಾಣವಾಗಿ ಪ್ರಸಿದ್ಧ. ಇಲ್ಲಿಗೆ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ನವಜೋಡಿ ಹನಿಮೂನಿಗಾಗಿ ಆಗಮಿಸುತ್ತದೆ.

saint kits country

ಮಾಲ್ಡೀವ್ಸ್

ಒಂದುಕಾಲದ ಭಾರತೀಯರ ನೆಚ್ಚಿನ ಪ್ರವಾಸಿ ತಾಣ ಮಾಲ್ಡೀವ್ಸ್‌ ಅತೀ ಚಿಕ್ಕ ದೇಶಗಳಲ್ಲಿ ಒಂದು. 73,637 ಎಕ್ರೆ ವೀಸ್ತೀರ್ಣದ ಇದು ಐಷಾರಾಮಿ ಹನಿಮೂನ್ ತಾಣವಾಗಿ ಜನಪ್ರಿಯ. ಹವಳ ದ್ವೀಪಗಳು ಮತ್ತು ಐಷಾರಾಮಿ ರೆಸಾರ್ಟ್‌ಗಳು ಇಲ್ಲಿ ಜನಪ್ರಿಯ.

ಮಾಲ್ಟಾ

77,838 ಎಕ್ರೆ ವಿಸ್ತೀರ್ಣವನ್ನು ಹೊಂದಿರುವ ಮಾಲ್ಟಾ ವಿಶ್ವದ 10ನೇ ಚಿಕ್ಕ ದೇಶ. ಮೆಡಿಟರೇನಿಯನ್ ಸಮುದ್ರದಲ್ಲಿರುವ ಈ ದೇಶವು ಐಷಾರಾಮಿ ರಜಾ ತಾಣವಾಗಿ ಪ್ರಸಿದ್ಧ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!