Monday, November 17, 2025
Monday, November 17, 2025

ಭಾರತದಲ್ಲಿ ʻರಕ್ತದ ನದಿʼಯಿರುವ ವಿಚಾರ ನಿಮಗೆ ಗೊತ್ತಾ?

ಭಾರತದಲ್ಲಿ ಅನೇಕ ನದಿಗಳು ಹರಿಯುತ್ತವೆ. ಒಂದೊಂದು ನದಿಗೂ ಅದರದೇ ಆದ ಮೂಲವಿದ್ದು, ವಿಶೇಷತೆಗಳು ಅನೇಕವಿದೆ. ಆದರೆ ದೇಶದಲ್ಲಿರುವ ರಕ್ತದ ನದಿಯ ಬಗ್ಗೆ ನಿಮಗೆ ಗೊತ್ತಾ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಭಾರತದಲ್ಲಿ ಗಂಗಾ, ಗೋದಾವರಿ, ಕೃಷ್ಣ, ಯಮುನಾ, ನರ್ಮದಾ, ಸಿಂಧು, ಬ್ರಹ್ಮಪುತ್ರ, ಮಹಾನದಿ, ಕಾವೇರಿ ಮತ್ತು ತಪತಿ ಹೀಗೆ ಹೇಳುತ್ತಾ ಹೋದರೆ ಅನೇಕ ನದಿಗಳು ಹರಿಯುತ್ತವೆ. ಅವುಗಳ ಹುಟ್ಟು, ಹರಿವಿನ ಹಿಂದಿರುವ ಐತಿಹ್ಯ ಎಲ್ಲವೂ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ 'ರಕ್ತದ ನದಿ' (bloody river) ಬಗ್ಗೆ ನಿಮಗೆ ಮಾಹಿತಿ ಇದೆಯಾ..? ಮೂಲವೆಲ್ಲಿ, ಎತ್ತ ಕಡೆಗೆ ಹರಿಯುತ್ತವೆ ? ಇಂತಹ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ರಕ್ತದ ನದಿಯ ಹುಟ್ಟು ಎಲ್ಲಿ?

'ರಕ್ತಸಿಕ್ತ ನದಿ', 'ರಕ್ತದ ನದಿ' ಹೀಗೆ ಅನೇಕ ಹೆಸರುಗಳಿಂದ ಗುರುತಿಸಿಕೊಂಡಿರುವ ನದಿಯ ಮೂಲ ಹೆಸರು ಲೋಹಿತ್ ನದಿ (Lohit River). ಈ ನದಿ ಪೂರ್ವ ಟಿಬೆಟ್‌ ನ ಝಯಾಲ್‌ ಚು ಪರ್ವತ ಶ್ರೇಣಿಯಲ್ಲಿ ಹುಟ್ಟುತ್ತದೆ. ಭಾರತದ ಅರುಣಾಚಲ ಅರುಣಾಚಲ ಪ್ರದೇಶದಲ್ಲಿ ಸುಮಾರು 200 ಕಿಲೋಮೀಟರ್ ಹರಿಯುತ್ತದೆ. ಇದಾದ ನಂತರ ಅದು ಅಸ್ಸಾಂನ ಬಯಲು ಪ್ರದೇಶವನ್ನು ಪ್ರವೇಶಿಸುತ್ತದೆ. ಲೋಹಿತ್ ನದಿ ಅಂತಿಮವಾಗಿ ಬ್ರಹ್ಮಪುತ್ರ ನದಿಯನ್ನು (Brahmaputra river) ಸೇರುತ್ತದೆ. ಲೋಹಿತ್‌ ನದಿಯು ಒಟ್ಟು ಉದ್ದ 2677ಕಿ.ಮೀ.

river-GettyImages-126332102

ನದಿಯ ಕೆಂಪು ಬಣ್ಣಕ್ಕೆ ಕಾರಣವೇನು ?

ಅಷ್ಟಕ್ಕೂ ಈ ನದಿ ಕೆಂಪು ಬಣ್ಣದಿಂದ ಕೂಡಿರುವುದೇಕೆ ? ಈ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗೋದಕ್ಕೆ ಏನು ಕಾರಣ ಗೊತ್ತಾ? ಖಂಡಿತವಾಗಿಯೂ ನೀವು ಅಂದುಕೊಂಡಂತೆ ಇದಕ್ಕೆ ಕಾರಣ ರಕ್ತವಲ್ಲ. ಇಲ್ಲಿ ನದಿಯಲ್ಲಿ ಕೆಂಪು ಮಣ್ಣು ಇದೆ. ಲೋಹಿತ್‌ ಜಲಾನಯನ ಪ್ರದೇಶದಲ್ಲಿ ಕೆಂಪು ಲ್ಯಾಟರೈಟ್‌ ಮಣ್ಣಿನ ಮೂಲಕ ಹಾದುಹೋಗುತ್ತದೆ. ಇದರಿಂದಾಗಿ ನದಿ ನೀರು ಕೆಂಪು ಬಣ್ಣಕ್ಕೆ ತಿರುಗಿದ್ದು, ಇದನ್ನು ರಕ್ತ ನದಿ ಎನ್ನುತ್ತಾರೆ. ಅಲ್ಲದೆ ಲೋಹಿತ್‌ ನದಿಗೆ ಅದರ ಪ್ರಕ್ಷುಬ್ದತೆ ಮತ್ತು ಭೋರ್ಗರೆತದ ಸ್ವಭಾವದಿಂದಲೂ ಈ ಹೆಸರು ಬಂದಿರಬಹುದೆಂದು ಇತಿಹಾಸ ಹೇಳುತ್ತದೆ.

ಒಟ್ಟಿನಲ್ಲಿ ಲೋಹಿತ್ ನದಿಗೆ ಅದರ ಅಪಾಯಕಾರಿ ಹರಿವು ಮತ್ತು ಬಣ್ಣದಿಂದಾಗಿ ಈ ಹೆಸರು ಬಂದಿರಬಹುದು. ಆದರೂ ಈ ನದಿಯು ನೈಸರ್ಗಿಕ ಸೌಂದರ್ಯ ಮತ್ತು ನಿಗೂಢತೆಯನ್ನು ಮೆಚ್ಚಿಕೊಳ್ಳಲೇಬೇಕು. ಭಯಾನಕವೆನ್ನಿಸಿದರೂ ಪ್ರಕೃತಿ ರಮಣೀಯವಾದ ನೈಸರ್ಗಿಕ ಸೌಂದರ್ಯದಿಂದ ನೋಡುಗರನ್ನು ಬೆರಗುಗೊಳಿಸುವ ಶಕ್ತಿ ಈ ನದಿಗೆ ಇದೆಯೆಂದರೆ ನಂಬಲೇಬೇಕು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!