ಯಾರಿಗೂ ಕಾಣದ ದೆವ್ವ ಕಾಜೋಲ್ ಗೆ ಕಂಡದ್ದು ಹೇಗೆ?
ಮಾ ಎಂಬ ಹೆಸರಿನ ಹಿಂದ ಚಿತ್ರದಲ್ಲಿ ನಟಿಸುತ್ತಿರುವ ಕಾಜೋಲ್, ರಾಮೋಜಿ ಫಿಲ್ಮ್ ಸಿಟಿಗೆ ಶೂಟ್ ಗೆ ಬಂದಿದ್ದರು. ಹಾರರ್ ಚಿತ್ರವಾಗಿದ್ದರಿಂದ ಇಡೀ ಚಿತ್ರ ರಾಮೋಜಿ ಸ್ಟುಡಿಯೋದಲ್ಲೇ ನಡೆದಿದೆ. ಹಾರರ್ ಚಿತ್ರದ ಶೂಟ್ ಬಹುತೇಕ ರಾತ್ರಿ ನಡೆಯುವುದು ವಾಡಿಕೆ. ಈ ಚಿತ್ರಕ್ಕೂ ಹೆಚ್ಚು ನೈಟ್ ಶೂಟ್ ಮಾಡಲಾಗಿತ್ತು. ಚಿತ್ರೀಕರಣವೂ ಮುಗಿದು,ಸಿನಿಮಾ ಬಿಡುಗಡೆಯ ದಿನವೂ ಹತ್ತಿರವಿದೆ. ಆದರೆ ಕಾಜೋಲ್ ತಮ್ಮ ಸಿನಿಮಾ ಪ್ರಚಾರದ ವೇಳೆಯಲ್ಲಿ ತಮ್ಮ ವೈಯಕ್ತಿಕ ಅನುಭವವನ್ನು ಹೇಳಿಕೊಳ್ಳುವ ಮೂಲಕ ಪ್ರವಾಸಿಗರನ್ನು ಬೆಚ್ಚಿ ಬೀಳಿಸುವ ಕೆಲಸ ಮಾಡಿದ್ದಾರೆ.
- ರಾಜೀವ ಸಮರ್ಥ
ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇಲ್ಲಿ ಸಾವಿರಾರು ಸಿನಿಮಾಗಳು ಶೂಟ್ ಆಗಿವೆ. ‘ಬಾಹುಬಲಿ’, ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೊಣ’ ರೀತಿಯ ಸಿನಿಮಾಗಳ ಚಿತ್ರೀಕರಣ ನಡೆದಿದ್ದು ಇಲ್ಲಿಯೇ. ಇಲ್ಲಿ ಟ್ರೇನ್ ಸೆಟ್, ವಿಮಾನ ನಿಲ್ದಾಣದ ಸೆಟ್, ಹೋಟೆಲ್, ರೂಂ, ಅಪಾರ್ಟ್ಮೆಂಟ್, ಭೂತ ಬಂಗಲೆ ಹೀಗೆ ನಾನಾ ರೀತಿಯ ಸೆಟ್ಗಳು ಲಭ್ಯ. ಇದು ಶೂಟಿಂಗ್ ಹಾಟ್ಸ್ಪಾಟ್ ಜೊತೆ ಪ್ರವಾಸಿ ತಾಣ ಕೂಡ ಹೌದು. ರಾಮೋಜಿ ಫಿಲ್ಮ್ ಸಿಟಿಯ ವೈಭವದ ಬಗ್ಗೆ ಕಳೆದ ವಾರ ಪ್ರವಾಸಿ ಪ್ರಪಂಚ ವಿಸ್ತೃತ ವಿವರವನ್ನೇ ನೀಡಿತ್ತು. ಆದರೆ ಬಾಲಿವುಡ್ ನ ಬೆಕ್ಕಿನ ಕಣ್ಣಿನ ಬೆಡಗಿ, ಅಜಯ್ ದೇವಗನ್ ನ ಮನೆಯೊಡತಿ ಕಾಜೋಲ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಆಗಿರುವ ಅನುಭವ ವಿಭಿನ್ನ ರೀತಿಯದ್ದು.
ಮಾ ಎಂಬ ಹೆಸರಿನ ಹಿಂದ ಚಿತ್ರದಲ್ಲಿ ನಟಿಸುತ್ತಿರುವ ಕಾಜೋಲ್, ರಾಮೋಜಿ ಫಿಲ್ಮ್ ಸಿಟಿಗೆ ಶೂಟ್ ಗೆ ಬಂದಿದ್ದರು. ಹೇಳಿ ಕೇಳಿ ಆಕೆ ನಟಿಸುತ್ತಾ ಇರೋದು ಒಂದು ಹಾರರ್ ಚಿತ್ರ. ಇಡೀ ಚಿತ್ರ ರಾಮೋಜಿ ಸ್ಟುಡಿಯೋದಲ್ಲೇ ನಡೆದಿದೆ. ಹಾರರ್ ಚಿತ್ರದ ಶೂಟ್ ಬಹುತೇಕ ರಾತ್ರಿ ನಡೆಯುವುದು ವಾಡಿಕೆ. ಈ ಚಿತ್ರಕ್ಕೂ ಹೆಚ್ಚು ನೈಟ್ ಶೂಟ್ ಮಾಡಲಾಗಿತ್ತು. ಇದೀಗ ಚಿತ್ರೀಕರಣವೂ ಮುಗಿದಿದೆ. ಸಿನಿಮಾ ಬಿಡುಗಡೆಯ ದಿನವೂ ಹತ್ತಿರವಿದೆ. ಆದರೆ ಕಾಜೋಲ್ ತಮ್ಮ ಸಿನಿಮಾ ಪ್ರಚಾರದ ವೇಳೆಯಲ್ಲಿ ತಮ್ಮ ವೈಯಕ್ತಿಕ ಅನುಭವವನ್ನು ಹೇಳಿಕೊಳ್ಳುವ ಮೂಲಕ ಪ್ರವಾಸಿಗರನ್ನು ಬೆಚ್ಚಿ ಬೀಳಿಸುವ ಕೆಲಸ ಮಾಡಿದ್ದಾರೆ.

ಕಾಜೋಲ್ ಗೆ ರಾಮೋಜಿ ಫಿಲ್ಮ್ ಸಿಟಿ ಭಯ ಹುಟ್ಟಿಸಿತಂತೆ. ಅಲ್ಲಿ ಆಕೆಗೆ ನೆಗೆಟಿವ್ ಎನರ್ಜಿ ಅನುಭವಕ್ಕೆ ಬಂದಿತಂತೆ. ಅಲ್ಲಿಂದ ಹೊರಟರೆ ಸಾಕು ಎಂದು ಅನಿಸಿತ್ತಂತೆ. ಇನ್ಯಾವತ್ತೂ ರಾಮೋಜಿ ಫಿಲ್ಮ್ ಸಿಟಿಗೆ ಬರುವುದಿಲ್ಲ ಎಂದು ನಿರ್ಧರಿಸಿ ಹೊರಟುಬಿಟ್ಟರಂತೆ! ಇದು ಕಾಜೋಲ್ ಅನುಭವಿಸಿದ ಫಜೀತಿ. ಕಾಜೋಲ್ ಪ್ರಕಾರ ಈ ರಾಮೋಜಿ ಫಿಲ್ಮ್ ಸಿಟಿ ಒಂದು ಭಯಾನಕ ಸ್ಥಳ!
ಒಬ್ಬ ಖ್ಯಾತ ಬಾಲಿವುಡ್ ನಟಿ ಸಿನಿಮಾ ಪ್ರಚಾರಕ್ಕೋ ಇನ್ಯಾವುದೋ ಕಾರಣಕ್ಕೋ ಒಂದು ಖ್ಯಾತ ಪ್ರವಾಸಿ ತಾಣ ಅಥವಾ ಪ್ರತಿಷ್ಠಿತ ಸ್ಟುಡಿಯೋ ಬಗ್ಗೆ ಈ ರೀತಿಯ ಕಥೆ ಹುಟ್ಟುಹಾಕುವುದು ಖಂಡಿತವಾಗಿಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಕಾಜೋಲ್ ಗೆ ಆದ ಈ ವೈಯಕ್ತಿಕ ಅನುಭವ ಸಾರ್ವತ್ರಿಕವಾಗಿ ಪರಿಗಣಿಸುವುದು ತಪ್ಪಾಗುತ್ತದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇಲ್ಲಿಯ ತನಕ ನೂರಾರು ಚಿತ್ರಗಳ ಚಿತ್ರೀಕರಣ ನಡೆದಿದೆ. ಬಾಹುಬಲಿ ವಿಕ್ರಾಂತ್ ರೋಣ ಥರದ ಚಿತ್ರತಂಡಗಳು ತಿಂಗಳುಗಟ್ಟಲೆ ಬೀಡುಬಿಟ್ಟಿವೆ. ಇಂದಿಗೂ ಸಹಸ್ರಾರು ಪ್ರವಾಸಿಗಳು ಅಲ್ಲಿಗೆ ಭೇಟಿ ನೀಡುತ್ತಾರೆ. ಅವರು ಯಾರಿಗೂ ಆಗದ ಅನುಭವ ಕಾಜೋಲ್ ಗೆ ಆಗಿದೆ ಅಂದರೆ ಇದು ತಮ್ಮ ಹಾರರ್ ಸಿನಿಮಾ ಪ್ರಚಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಎನ್ನಬೇಕಾಗುತ್ತದೆ.
ಕಾಜೋಲ್ ಹೇಳಿಕೆಗೆ ಈಗ ಉಪ್ಪುಖಾರ ಸೇರಿಸಿ ಇನ್ನೂ ಹಲವರಿಗೆ ರಾಮೋಜಿ ಸಿಟಿಯಲ್ಲಿ ಹಾರರ್ ಅನುಭವವಾಗಿತ್ತು ಎಂದು ಕೆಲವು ಮಾಧ್ಯಮಗಳು ಕಥೆ ಕಟ್ಟುತ್ತಿವೆ. ಆದರೆ ಇವೆಲ್ಲವೂ ಕೇವಲ ಭ್ರಮೆ ಅನ್ನದೇ ಬೇರೆ ಏನನ್ನೂ ಹೇಳಲಾಗುವುದಿಲ್ಲ.

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ಹಗಲು ರಾತ್ರಿಗಳನ್ನು ಕಳೆದಿದ್ದಾರೆ. ಯಾರೂ ಕಹಿ ಅನುಭವ ಅನುಭವಿಸಿಲ್ಲ. ಕಾಜೋಲ್ ಮಾತಿನಲ್ಲಿ ಸತ್ಯವಿಲ್ಲ ಎಂಬುದು ಸರ್ವರೀತಿಯಲ್ಲಿ ಸಾಬೀತಾಗಿದೆ. ಸಿನಿಮಾ ಪ್ರಚಾರಕ್ಕಾಗಿ ಇಂಥದ್ದೊಂದು ಕಥೆಕಟ್ಟಿದ ಕಾಜೋಲ್ ರಾಮೋಜಿ ಫಿಲ್ಮ್ ಸಿಟಿಯ ಕೆಂಗಣ್ಣಿಗೆ ಗುರಿಯಾದರೆ, ಭಾರೀ ನಷ್ಟವನ್ನು ಭರಿಸಿಕೊಡಬೇಕಾಗುತ್ತದೆ. ಅದು ನಿಜವಾದ ಹಾರರ್ ಸ್ಟೋರಿ ಆಗುತ್ತದೆ.