ಗದಗ ಮೃಗಾಲಯ ಅಭಿವೃದ್ಧಿ, ವಿಸ್ತರಣೆ ಕುರಿತಂತೆ ವರದಿ ಪರಿಶೀಲನೆ
ಗದಗ ಮೃಗಾಲಯ ಅಭಿವೃದ್ಧಿ ಕುರಿತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದರು. ಗದಗದ ಬಿಂಕದಕಟ್ಟಿಯಲ್ಲಿರುವ ಫಾರೆಸ್ಟ್ ಗೆಸ್ಟ್ಹೌಸ್ನಲ್ಲಿ ನಡೆದ ಸಭೆಯಲ್ಲಿ ಮಹತ್ವದ ವಿಚಾರಗಳನ್ನು ಚರ್ಚಿಸಲಾಯಿತು.
ಗದಗದಲ್ಲಿ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ಇಲ್ಲಿನ ಗದಗ ಮೃಗಾಲಯವನ್ನು ಅಭಿವೃದ್ಧಿಗೊಳಿಸುವ ಯೋಜನೆಯನ್ನು ಅರಣ್ಯ ಇಲಾಖೆ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರ ರೂಪಿಸಿದ್ದು, ಅದರಂತೆ ಗದಗ ಮೃಗಾಲಯವು ಹುಬ್ಬಳ್ಳಿ- ಹೊಸಪೇಟೆ ಹೆದ್ದಾರಿವರೆಗೆ ವಿಸ್ತರಣೆಗೊಳ್ಳಲಿದೆ.

ಪ್ರಸ್ತುತ 40.02 ಎಕರೆಯಲ್ಲಿರುವ ಮೃಗಾಲಯವು ಹೊಸ ಸೌಲಭ್ಯಗಳ ಜತೆಗೆ 13.20 ಎಕರೆಯಷ್ಟು ವಿಸ್ತಾರಗೊಳ್ಳಲಿದೆ. ಹೆದ್ದಾರಿಗೆ ಹೊಂದಿಕೊಂಡಂತೆ ಆಕರ್ಷಕ ಪ್ರವೇಶದ್ವಾರ ನಿರ್ಮಾಣ ಈ ಯೋಜನೆಯ ಪ್ರಮುಖ ಭಾಗವಾಗಿದೆ. ಜತೆಗೆ ಆ್ಯಂಪಿಥಿಯೇಟರ್ ನಿರ್ಮಾಣ. ಕ್ಲಾಕ್‌ರೂಮ್ ಸೌಲಭ್ಯ, ಫುಡ್‌ಕೋರ್ಟ್ ರೆಸ್ಟೋರೆಂಟ್ ಸ್ಥಾಪನೆ, ಕರಕುಶಲ ವಸ್ತುಗಳ ಮಾರಾಟ ಮಳಿಗೆ, ವಿಶಾಲವಾದ ಪಾರ್ಕಿಂಗ್ ಏರಿಯಾ ಸೇರಿದಂತೆ ಪ್ರವಾಸಿಗರಿಗೆ ಅತ್ಯಾಧುನಿಕ ಹಾಗೂ ಆರಾಮದಾಯಕ ಸೌಲಭ್ಯಗಳನ್ನು ಕಲ್ಪಿಸಲು ಯೋಜಿಸಲಾಗಿದೆ. ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಈ ಕುರಿತು ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದರು. ಗದಗದ ಬಿಂಕದಕಟ್ಟಿಯಲ್ಲಿರುವ ಫಾರೆಸ್ಟ್ ಗೆಸ್ಟ್ಹೌಸ್ನಲ್ಲಿ ನಡೆದ ಸಭೆಯಲ್ಲಿ ಮಹತ್ವದ ವಿಚಾರಗಳನ್ನು ಚರ್ಚಿಸಲಾಯಿತು. ಅಲ್ಲದೆ ಮೃಗಾಲಯ ಅಭಿವೃದ್ಧಿ, ವಿಸ್ತರಣೆ ಕುರಿತಂತೆ ವರದಿ ಪರಿಶೀಲಿಸಿ ಹಲವು ಸಲಹೆ ಸೂಚನೆಗಳನ್ನು ನೀಡಲಾಯಿತು.