Tuesday, August 18, 2026
Tuesday, August 18, 2026

ಜಾರ್ಜಿಯಾದಲ್ಲಿ ಸಿನಿಮಾ ಶೂಟ್‌ ಮಾಡೋರಿಗೆ ಗುಡ್‌ ನ್ಯೂಸ್‌

ಜಾರ್ಜಿಯನ್ ಸರಕಾರವು ತನ್ನ 'ಫಿಲ್ಮ್ ಇನ್ ಜಾರ್ಜಿಯಾ' ಯೋಜನೆಯಡಿಯಲ್ಲಿ ದೇಶದಲ್ಲಿ ಶೂಟಿಂಗ್ ಮಾಡುವ ಅಂತಾರಾಷ್ಟ್ರೀಯ ಚಿತ್ರನಿರ್ಮಾಪಕರಿಗೆ ಅರ್ಹ ವೆಚ್ಚಗಳ ಮೇಲೆ ಬರೋಬ್ಬರಿ ಶೇ. 20 ರಿಂದ 25 ರಷ್ಟು ನಗದು ಮರುಪಾವತಿ ಇನ್ಸೆಂಟಿವ್ ನೀಡುತ್ತಿದೆ.

ಯುರೋಪ್ ಮತ್ತು ಏಷ್ಯಾದ ಗಡಿಯಲ್ಲಿರುವ ಸುಂದರ ಕಂಟ್ರಿ ಜಾರ್ಜಿಯಾ ಜಾಗತಿಕ ಚಿತ್ರರಂಗದ ಅತ್ಯಂತ ಪ್ರಮುಖ ಶೂಟಿಂಗ್ ತಾಣವಾಗಿ ಹೊರಹೊಮ್ಮಿದೆ. ತನ್ನ ವೈವಿಧ್ಯಮಯ ನೈಸರ್ಗಿಕ ದೃಶ್ಯಾವಳಿಗಳು ಹಾಗೂ ಸರಕಾರ ಒದಗಿಸುತ್ತಿರುವ ಬೃಹತ್ ಆರ್ಥಿಕ ರಿಯಾಯಿತಿಗಳಿಂದಾಗಿ ಪ್ರಪಂಚಾದ್ಯಂತದ ಸಿನಿಮಾ ನಿರ್ಮಾಪಕರು ಹಾಗೂ ಭಾರತದ ಬಾಲಿವುಡ್-ದಕ್ಷಿಣ ಭಾರತೀಯ ಚಿತ್ರರಂಗವನ್ನು ತನ್ನತ್ತ ಸೆಳೆಯುತ್ತಿದೆ.

ಇದನ್ನೂ ಓದಿ: ದಕ್ಷಿಣ ಭಾರತದ ಪ್ರವಾಸಿ ತಾಣಗಳತ್ತ ದಿ ಹಾಸ್ಟೆಲ್ಲರ್ ಚಿತ್ತ

ಜಾರ್ಜಿಯನ್ ಸರಕಾರವು ತನ್ನ 'ಫಿಲ್ಮ್ ಇನ್ ಜಾರ್ಜಿಯಾ' ಯೋಜನೆಯಡಿಯಲ್ಲಿ ದೇಶದಲ್ಲಿ ಶೂಟಿಂಗ್ ಮಾಡುವ ಅಂತಾರಾಷ್ಟ್ರೀಯ ಚಿತ್ರನಿರ್ಮಾಪಕರಿಗೆ ಅರ್ಹ ವೆಚ್ಚಗಳ ಮೇಲೆ ಬರೋಬ್ಬರಿ ಶೇ. 20 ರಿಂದ 25 ರಷ್ಟು ನಗದು ಮರುಪಾವತಿ ಇನ್ಸೆಂಟಿವ್ ನೀಡುತ್ತಿದೆ. ಸಿಂಗಲ್‌ ವಿಂಡೋ ವ್ಯವಸ್ಥೆಯ ಮೂಲಕ ಅತ್ಯಂತ ವೇಗವಾಗಿ ಶೂಟಿಂಗ್ ಅನುಮತಿಗಳನ್ನು ಒದಗಿಸಲಾಗುತ್ತಿದೆ.

ಜಾರ್ಜಿಯಾ ದೇಶವು ತೀರ ಕಡಿಮೆ ಅಂತರದಲ್ಲಿ ಭೂದೃಶ್ಯಗಳ ಭಾರಿ ವೈವಿಧ್ಯತೆಯನ್ನು ಹೊಂದಿದೆ. ಕರಾವಳಿಯ ಬೀಚ್‌ಗಳು, ಕೌಕಾಸಸ್ ಪರ್ವತ ಶ್ರೇಣಿಗಳು, ಹಿಮಾವೃತ ಶಿಖರಗಳು, ಪ್ರಾಚೀನ ಕೋಟೆಗಳು, ಹಳೆಯ ಯುರೋಪಿಯನ್ ಶೈಲಿಯ ನಗರ ಬೀದಿಗಳು ಮತ್ತು ಮರುಭೂಮಿಯಂಥ ವಾತಾವರಣ ಒಂದೇ ದೇಶದಲ್ಲಿ ಲಭ್ಯವಿದೆ. ರಾಜಧಾನಿ ಟಿಬಿಲಿಸಿ, ಬಟುಮಿ ಹಾಗೂ ಕಾಝ್ಬೆಗಿ ಪರ್ವತ ಪ್ರಾಂತ್ಯಗಳು ಸಿನಿಮಾ ಶೂಟಿಂಗ್‌ಗೆ ಪ್ರಮುಖ ಕೇಂದ್ರಗಳಾಗಿವೆ.

ಹಲವು ಪ್ರಸಿದ್ಧ ಬಾಲಿವುಡ್, ತೆಲುಗು ಮತ್ತು ತಮಿಳು ಸಿನಿಮಾಗಳು ಜಾರ್ಜಿಯಾದ ಆಕರ್ಷಕ ತಾಣಗಳಲ್ಲಿ ಶೂಟಿಂಗ್ ಪೂರ್ಣಗೊಳಿಸಿವೆ. ಯುರೋಪ್‌ನ ಇತರ ದೇಶಗಳಿಗೆ ಹೋಲಿಸಿದರೆ ಜಾರ್ಜಿಯಾದಲ್ಲಿ ಚಿತ್ರೀಕರಣ ನಿರ್ಮಾಣ ವೆಚ್ಚ ಅತ್ಯಂತ ಕಡಿಮೆಯಿರುವುದು ಮತ್ತು ಭಾರತದಿಂದ ಸುಲಭ ವಿಮಾನ ಸಂಪರ್ಕ ಹಾಗೂ ವೀಸಾ ಅನುಕೂಲಗಳಿರುವುದು ಭಾರತೀಯ ನಿರ್ಮಾಪಕರಿಗೆ ವರವಾಗಿದೆ.

ಈ ಯೋಜನೆಯು ಜಾರ್ಜಿಯಾದಲ್ಲಿ ಪ್ರವಾಸೋದ್ಯಮಕ್ಕೂ ಭಾರಿ ಉತ್ತೇಜನ ನೀಡುತ್ತಿದ್ದು, ಜಾಗತಿಕ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ