Saturday, July 26, 2025
Saturday, July 26, 2025

ಕೆ ಮೋಹನ್ ಸುಂದರ್ ಎಂಬ ಕನಸುಗಾರನ ಅಚ್ಚರಿಯ ಸಾಧನೆ!

ಕೈಗೆಟುಕುವ ದರದಲ್ಲಿ ಮಧ್ಯಮ ವರ್ಗದ ಜನರನ್ನೂ ವಿದೇಶ ಪ್ರವಾಸದತ್ತ ಕರೆ ತರುವ ಟ್ರಾವೆಲ್‌ ಮಾರ್ಟ್, ಕೊಟ್ಟ ಕಾಸಿಗೆ ಮೋಸವಾಗದಂತೆ ಪ್ರತಿ ಪ್ರಯಾಣವನ್ನೂ ಆಯೋಜಿಸುತ್ತಾರೆ. ಪ್ರಯಾಣಿಕರನ್ನು ಮರೆಯಲಾಗದ ನೆನಪುಗಳಿಗೆ ಬಂಧಿಯಾಗಿಸುತ್ತಾರೆ. ಪ್ರಯಾಣ ಮುಗಿದ ನಂತರವೂ ಪ್ರವಾಸದ ಗುಂಗಿನಲ್ಲೇ ಇರುವ ಹಾಗೆ ಇಡೀ ಪ್ರಯಾಣವನ್ನು ವಿಸ್ಮಯವಾಗಿಸುತ್ತದೆ. ಆರಾಮದಾಯಕ ಪ್ರಯಾಣ, ಅತ್ಯುತ್ತಮ ಆತಿಥ್ಯ ನೀಡುವ ಹೊಟೇಲ್, ಮೈಮನ ತಣಿಸುವ ತಾಣಗಳು ಹೀಗೆ ಟ್ರಾವೆಲ್ ಮಾರ್ಟ್ ಸಂಸ್ಥೆಯದ್ದು ಎಲ್ಲದರಲ್ಲೂ ಅಚ್ಚುಕಟ್ಟು.

ವಿದೇಶ ಪ್ರವಾಸ ಬಹುತೇಕರ ಕನಸು. ಆ ಕನಸಿಗೆ ರೆಕ್ಕೆ ಕಟ್ಟುವವರು ಯಾರು? ಕೂತಲ್ಲೇ ಕೂತು ಕೆಟ್ಟಿರುವವರಿಗೆ ಜಗತ್ತನ್ನು ತೋರಿಸುವವರು ಯಾರು? ವಿದೇಶ ಪ್ರವಾಸವೆಂದರೆ ಕೈಗೆಟುಕದ ನಕ್ಷತ್ರವೇ? ಕಾಸಿದ್ದವನು ಮಾತ್ರ ವಿದೇಶಕ್ಕೆ ಹಾರಬಹುದಾ? ವಿದೇಶಿ ಜನಜೀವನ ಮತ್ತು ಅಲ್ಲಿನ ಭಾಷೆ ಅರಿಯದ ನಮ್ಮ ಪಾಲಿಗೆ ದಿಕ್ಸೂಚಿ ಯಾರು? ಹೀಗೆ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈಗೆಲ್ಲ ವಿದೇಶ ಸುತ್ತುವುದು ಕನಸಾಗಿ ಉಳಿದಿಲ್ಲ. ಕಾಣುವ ಕನಸನ್ನು ನನಸು ಮಾಡಲು ಸಾವಿರಾರು ಪ್ರಯಾಣ ಸಂಸ್ಥೆಗಳು ಎದ್ದು ನಿಂತಿವೆ. ಮಧ್ಯಮ ವರ್ಗದ ಜನರನ್ನೂ ವಿದೇಶ ಪ್ರವಾಸದತ್ತ ಸೆಳೆಯುತ್ತಿವೆ. 'ಟ್ರಾವೆಲ್ ಮಾರ್ಟ್' ಅಂಥ ಕನಸುಗಳನ್ನು ನನಸು ಮಾಡುತ್ತಿರುವ ಅತ್ಯಂತ ವಿಶ್ವಾಸಾರ್ಹ ಟ್ರಾವೆಲ್ ಏಜೆನ್ಸಿ. ಇದು ಬಜೆಟ್ ಸ್ನೇಹಿ ಸಂಸ್ಥೆ. ಸೇವೆ ಮತ್ತು ವಿಶ್ವಾಸದಲ್ಲಿ ಯಾವುದೇ ರಾಜಿಯಿಲ್ಲ. ಇದು ಮೂರು ಲಕ್ಷಕ್ಕೂ ಅಧಿಕ ಗ್ರಾಹಕರ ಭರವಸೆಯನ್ನು ಉಳಿಸಿಕೊಂಡು ಹೆಜ್ಜೆಯಿಡುತ್ತಿರುವ ದೇಶದ ಅತ್ಯುನ್ನತ ಸಂಸ್ಥೆಯೂ ಹೌದು. ಕಳೆದ ಹದಿನಾರು ವರ್ಷಗಳಿಂದ ಕೆ ಮೋಹನ್ ಸುಂದರ್ ಮತ್ತು ಕಿರಣ್ ಅವರ ನಾಯಕತ್ವ ಮತ್ತು ದೂರದೃಷ್ಠಿಯಲ್ಲಿ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಈವರೆಗೆ ನೂರು ತಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ದಿರುವ ಕೀರ್ತಿಗೂ ಟ್ರಾವೆಲ್ ಮಾರ್ಟ್ ಪಾತ್ರವಾಗಿದೆ. ಸಂಸ್ಥೆಯಲ್ಲಿ ಪ್ರವಾಸಿ ವಿಷಯಕ್ಕೆ ಸಂಬಂಧಿಸಿದ ತಜ್ಞರಿದ್ದಾರೆ. ಕೊಟ್ಟ ಕಾಸಿಗೆ ಮೋಸವಾಗದಂತೆ ಪ್ರತಿ ಪ್ರಯಾಣವನ್ನೂ ಅವರು ಯೋಜಿಸುತ್ತಾರೆ. ಪ್ರಯಾಣಿಕರನ್ನು ಮರೆಯಲಾಗದ ನೆನಪುಗಳಿಗೆ ಬಂಧಿಯಾಗಿಸುತ್ತಾರೆ. ಪ್ರಯಾಣ ಮುಗಿದ ನಂತರವೂ ಪ್ರವಾಸದ ಗುಂಗಿನಲ್ಲೇ ಇರುವ ಹಾಗೆ ಇಡೀ ಪ್ರಯಾಣವನ್ನು ಟ್ರಾವೆಲ್ ಮಾರ್ಟ್ ವಿಸ್ಮಯವಾಗಿಸುತ್ತದೆ. ಆರಾಮದಾಯಕ ಪ್ರಯಾಣ, ಅತ್ಯುತ್ತಮ ಆತಿಥ್ಯ ನೀಡುವ ಹೊಟೇಲ್, ಮೈಮನ ತಣಿಸುವ ತಾಣಗಳು ಹೀಗೆ ಟ್ರಾವೆಲ್ ಮಾರ್ಟ್ ಸಂಸ್ಥೆಯದ್ದು ಎಲ್ಲದರಲ್ಲೂ ಅಚ್ಚುಕಟ್ಟು. "ನಾವು ಕೇವಲ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಿಲ್ಲ. ಜೀವನವನ್ನು ರೂಪಿಸುವ, ಮನಸ್ಸು ಮತ್ತು ಹೃದಯವನ್ನು ಅರಳಿಸುವ ಅವಿಸ್ಮರಣೀಯ ನೆನಪುಗಳನ್ನು ನೀಡುತ್ತೇವೆ" ಟ್ರಾವೆಲ್ ಮಾರ್ಟ್ನ ಸಂಸ್ಥಾಪಕ ಕೆ. ಮೋಹನ್ ಸುಂದರ್ ಅವರ ಮಾತುಗಳಿವು.

travel mart

ಕನಸುಗಾರರ ಕನಸಿನ ಕೂಸು

ಟ್ರಾವೆಲ್ ಮಾರ್ಟ್ ಅಪ್ಪಟ ಕನಸುಗಾರರ ಕನಸಿನ ಕೂಸು. ಈ ಸಂಸ್ಥೆಯ ಅಗಾಧ ಸಾಧನೆಯ ಹಿಂದೆ ಕೆ. ಮೋಹನ್ ಸುಂದರ್ ಎಂಬ ವ್ಯಕ್ತಿಯ ಅಂತಃಶಕ್ತಿ ಮತ್ತು ಧೀಶಕ್ತಿ ಕೆಲಸ ಮಾಡಿದೆ. ಅವರಿಗಿದ್ದ ಸಾಧನೆಯ ಹಸಿವು, ಶ್ರದ್ಧೆ, ಪ್ರಾಮಾಣಿಕತೆ ಮತ್ತು ಹೋರಾಟದ ಮನೋಭಾವದಿಂದಲೇ ಇಂದು ಟ್ರಾವೆಲ್ ಮಾರ್ಟ್ ದೇಶದ ಅತ್ಯುನ್ನತ ಪ್ರಯಾಣ ಸಂಸ್ಥೆಯಾಗಿ ಹೆಸರು ಗಳಿಸಲು ಸಾಧ್ಯವಾಗಿದೆ. ಸಂಸ್ಥೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅವರು ಸತತ ಹದಿನಾರು ವರ್ಷಗಳಿಂದ ಗ್ರಾಹಕರ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಗ್ರಾಹಕರ ಸೇವೆಯನ್ನೇ ತಮ್ಮ ಧ್ಯೇಯ ವಾಕ್ಯವಾಗಿಸಿಕೊಂಡಿದ್ದಾರೆ. ಸೃಜನಶೀಲ ಮತ್ತು ಹೊಸ ತೆರನಾದ ಟೂರ್ ಪ್ಯಾಕೇಜ್ಗಳನ್ನು ಪರಿಚಯಿಸುವ ಮೂಲಕ ಕೆ ಮೋಹನ್ ಸುಂದರ್ ಈ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಕೈಗೆಟುಕುವ ದರದಲ್ಲಿ ಮಧ್ಯಮ ವರ್ಗದ ಜನರನ್ನೂ ವಿದೇಶ ಪ್ರವಾಸದತ್ತ ಕರೆ ತರುತ್ತಿದ್ದಾರೆ. ಕನಸುಗಾರ ಕೆ ಮೋಹನ್ ಸುಂದರ್ ಅವರ ಹೆಗಲಿಗೆ ಹೆಗಲಾಗಿ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ನಿರ್ವಾಹಕ ಎಂ. ಎಸ್ ಕಿರಣ್ ಶೆಟ್ಟಿ ಇದ್ದಾರೆ. ಇಪ್ಪತ್ತೊಂದು ವರ್ಷದ ತರುಣನಿದ್ದಾಗಲೇ ಕೆ ಮೋಹನ್ ಸುಂದರ್ ಇಂಥ ಸಾಹಸಕ್ಕೆ ಕೈ ಹಾಕಿದ್ದು ಮತ್ತೊಂದು ಅಚ್ಚರಿ. ಮೋಹನ್ ಸುಂದರ್ ಮತ್ತು ಎಂ. ಎಸ್ ಕಿರಣ್ ಶೆಟ್ಟಿ ಅವರ ಮಧ್ಯೆ ಸಾಕಷ್ಟು ವಯಸ್ಸಿನ ಅಂತರವಿದ್ದರೂ ಅವರಿಬ್ಬರದ್ದು ತಂದೆ-ಮಗನ ಶುದ್ಧ ಬಾಂಧವ್ಯ. ಅವರಿಬ್ಬರ ಮನೋಧರ್ಮ ಮತ್ತು ಆಲೋಚನಾಲಹರಿ ಒಂದೇ ಆಗಿದೆ. ಜೋಡಿಜೀವಗಳು ಸಂಸ್ಥೆಯ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ಗ್ರಾಹಕರ ಆಶೋತ್ತರಗಳನ್ನು ಈಡೇರಿಸುತ್ತಿದ್ದಾರೆ. ಪ್ರವಾಸೋದ್ಯಮ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕಠಿಣ ಪರಿಶ್ರಮದಿಂದಲೇ ಸಂಸ್ಥೆಯನ್ನು ಈ ಮಟ್ಟಕ್ಕೆ ಕೊಂಡೊಯ್ದಿರುವ ಕೆ ಮೋಹನ್ ಸುಂದರ್ ಮತ್ತು ಎಂ. ಎಸ್ ಕಿರಣ್ ಶೆಟ್ಟಿ ಮತ್ತಷ್ಟು ಉನ್ನತಿಗಾಗಿ ಹಗಲಿರುಳು ಏಕಮಾಡಿ ದುಡಿಯಲು ಸಿದ್ಧರಿದ್ದಾರೆ. ಇಬ್ಬರೂ ಯಶಸ್ಸಿನ ಹಾದಿಯಲ್ಲಿ ದಾಪುಗಾಲಿಡುತ್ತಾ ಸಾಗುತ್ತಿದ್ದಾರೆ.

travel mart 1

ಟ್ರಾವೆಲ್ ಮಾರ್ಟ್ ನ ಹೆಜ್ಜೆ

20೦8ರಲ್ಲಿ ಕೆ ಮೋಹನ್ ಸುಂದರ್ ಮತ್ತು ಶ್ರೀ ಎಂ ಎಸ್ ಕಿರಣ್ ಶೆಟ್ಟಿ ಅವರ ಜಂಟಿ ಸಹಯೋಗದಿಂದ ಸ್ಥಾಪನೆಗೊಂಡ ಟ್ರಾವೆಲ್ ಮಾರ್ಟ್ ಹದಿನಾರು ವಸಂತಗಳತ್ತ ಹೆಜ್ಜೆಯಿರಿಸಿದೆ. ಸಂಸ್ಥೆಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕೆ ಮೋಹನ್ ಸುಂದರ್ ಮತ್ತು ಸಹ ಸಂಸ್ಥಾಪಕರಾಗಿ ಎಂ. ಎಸ್ ಕಿರಣ್ ಶೆಟ್ಟಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಜತೆಗೆ ಪರಿಣಿತರ ತಂಡವಿದೆ. ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಮತ್ತು ಹಣಕ್ಕೆ ತಕ್ಕಂತೆ ಮೌಲ್ಯ ಸೇವೆಗಳನ್ನು ನೀಡುವುದು ಈ ಕಂಪನಿಯ ಮೂಲ ಉದ್ದೇಶವಾಗಿದೆ. ಏರ್ಲೈನ್ ಟಿಕೆಟ್ ಬುಕಿಂಗ್, ಗ್ರೌಂಡ್ ಟ್ರಾನ್ಸ್ಪೋರ್ಟ್, ಹೊಟೇಲ್ ಬುಕಿಂಗ್, ವೀಸಾ ಮತ್ತು ಪಾಸ್ಪೋರ್ಟ್ ಸೇವೆ, ವಿದೇಶಿ ವಿನಿಮಯ ಪ್ರಯಾಣ, ಟ್ರಾವೆಲ್ ಇನ್ಶೂರೆನ್ಸ್ ಸೇವೆ ಹೀಗೆ ಹತ್ತಾರು ರೀತಿಯಲ್ಲಿ ಟ್ರಾವೆಲ್ ಮಾರ್ಟ್ ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತಾ ಬಂದಿದೆ. ಟ್ರಾವೆಲ್ ಮಾರ್ಟ್ ಸಂಸ್ಥೆಯು ಎಲ್ಲ ಟೂರಿಸಂ ಬೋರ್ಡ್ ಗಳ ಜತೆಗೆ ನಿಕಟ ಸಂಪರ್ಕ ಮತ್ತು ಆತ್ಮೀಯತೆಯನ್ನು ಹೊಂದಿದೆ. ಸಂಸ್ಥೆಯ ಪ್ರಸಿದ್ಧತೆಗೆ ಇದು ಸಾಕ್ಷಿ. ಕೋವಿಡ್ ನಂಥ ಸಾಂಕ್ರಾಮಿಕ ರೋಗದಿಂದಾಗಿ ಪ್ರವಾಸೋದ್ಯಮ ಕ್ಷೇತ್ರ ನಲುಗಿ ಹೋಗಿದ್ದ ಸಂದರ್ಭದಲ್ಲಿಯೂ ಟ್ರಾವೆಲ್ ಮಾರ್ಟ್ ತನ್ನ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭರವಸೆ ಮೂಡಿಸಿತ್ತು. ಬೆಂಗಳೂರು, ಮುಂಬೈ, ಚೆನ್ನೈ, ಸಿಂಗಾಪುರ, ದುಬೈ ಮತ್ತು ಹಲವಾರು ಪ್ರತಿಷ್ಠಿತ ದೇಶ ಮತ್ತು ನಗರಗಳಲ್ಲಿ ಟ್ರಾವೆಲ್ ಮಾರ್ಟ್ನ ಶಾಖೆಗಳಿದ್ದು ಉತ್ತಮ ಸೇವೆಯನ್ನು ನೀಡುತ್ತಿದೆ.

ಟ್ರಾವೆಲ್ ಮಾರ್ಟ್ ಆಯ್ಕೆ

ಸುದೀರ್ಘ ಹದಿನಾರು ವರ್ಷಗಳಿಂದ ಟ್ರಾವೆಲ್ ಮಾರ್ಟ್ ಲಕ್ಷಾಂತರ ಗ್ರಾಹಕರ ವಿಶ್ವಾಸವನ್ನು ಉಳಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೆಜ್ಜೆಯಿಟ್ಟಲೆಲ್ಲ ಗೆಲುವು ಸಾಧಿಸಿದೆ. ವಿದೇಶ ಸುತ್ತುವ ಲಕ್ಷಾಂತರ ಜನರ ಕನಸುಗಳಿಗೆ ರೆಕ್ಕೆ ಕಟ್ಟಿದೆ. ಟ್ರಾವೆಲ್ ಮಾರ್ಟ್ ವ್ಯಾವಹಾರಿಕ ಸಂಸ್ಥೆ ಅಷ್ಟೇ ಅಲ್ಲ. ಅಲ್ಲಿ ಆತ್ಮೀಯತೆಯ ಅನುಸಂಧಾನವಿದೆ. ಆಪ್ತತೆಯಿದೆ. ಪ್ರತಿ ಗ್ರಾಹಕರಿಗೂ ಅವಿಸ್ಮರಣೀಯವಾದ ಪ್ರಯಾಣದ ಅನುಭವಗಳನ್ನು ಟ್ರಾವೆಲ್ ಮಾರ್ಟ್ ನೀಡುತ್ತಾ ಬಂದಿದೆ. ಬಜೆಟ್ ಸ್ನೇಹಿ ಸಂಸ್ಥೆ ಇದಾಗಿದ್ದು, ಪ್ರತಿ ಪ್ರಯಾಣವನ್ನೂ ಅಚ್ಚುಕಟ್ಟಾಗಿ ಯೋಜಿಸುತ್ತದೆ. ಸಂಸ್ಥೆಯಲ್ಲಿ ಪ್ರಯಾಣದ ಕುರಿತು ಅಪಾರ ಅನುಭವವಿರುವ ತಜ್ಞರಿದ್ದಾರೆ. ಅವರ ಮಾರ್ಗದರ್ಶನದಲ್ಲೇ ಪ್ರವಾಸ ರೂಪುಗೊಳ್ಳುತ್ತದೆ. ಟ್ರಾವೆಲ್ ಮಾರ್ಟ್ ವೈವಿಧ್ಯಮಯವಾದ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತದೆ. 24/7 ಸೇವೆ ನೀಡುವಲ್ಲಿ ಒಂದೂವರೆ ದಶಕದಿಂದ ನಿರತವಾಗಿದೆ. ಗ್ರೂಪ್ ಟ್ರಿಪ್, ಕಸ್ಟಮೈಸ್ ಟೂರ್, ಕಾರ್ಪೋರೇಟ್ ಪ್ರಯಾಣ ನಿರ್ವಹಣೆ, ಪಾಸ್ಪೋರ್ಟ್ ಮತ್ತು ವೀಸಾದಲ್ಲಿ ಗ್ರಾಹಕರಿಗೆ ಅಗತ್ಯ ನೆರವನ್ನು ನೀಡುತ್ತದೆ. ಟ್ರಾವೆಲ್ ಇನ್ಶೂರೆನ್ಸ್ ಸೌಲಭ್ಯವನ್ನೂ ಪ್ರಯಾಣಿಕರಿಗೆ ಒದಗಿಸುತ್ತದೆ. ಜವಾಬ್ದಾರಿಯುತ ಟ್ರಾವೆಲ್ ಏಜೆನ್ಸಿಯಾಗಿ ಟ್ರಾವೆಲ್ ಮಾರ್ಟ್ ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿದೆ. ದೇಶ ವಿದೇಶಗಳನ್ನು ಸುತ್ತಿಸುವುದು ಮಾತ್ರವಲ್ಲದೆ ಆಯಾ ಪ್ರದೇಶಗಳ ಜನಜೀವನ, ಸಂಸ್ಕೃತಿ ಮತ್ತು ಆಚಾರ ವಿಚಾರಗಳ ಕುರಿತು ಪ್ರಯಾಣಿಕರಿಗೆ ತಿಳಿಸಿಕೊಡುತ್ತದೆ. ಪರಿಸರ ಸ್ನೇಹಿ ಪ್ರವಾಸಕ್ಕೆ ಹೆಚ್ಚು ಒತ್ತು ಕೊಡುವ ಟ್ರಾವೆಲ್ ಮಾರ್ಟ್ ಅದನ್ನೇ ತನ್ನ ಧ್ಯೇಯವಾಗಿಸಿಕೊಂಡಿದೆ. ಅಸಂಖ್ಯಾತ ತೃಪ್ತ ಗ್ರಾಹಕರನ್ನು ಹೊಂದಿರುವ ಈ ಸಂಸ್ಥೆಯು ಹೊಸ ಕನಸುಗಳ ಬೆನ್ನತ್ತಿ ಸಾಗುತ್ತಿದೆ.

travel mart 111

ಸೆಲಿಬ್ರಿಟಿಗಳು ಮೆಚ್ಚಿದ ಸಂಸ್ಥೆ

ಟ್ರಾವೆಲ್ ಮಾರ್ಟ್ ಸಾಮಾನ್ಯ ಜನರ ವಿಶ್ವಾಸವನ್ನು ಗಳಿಸುವುದರ ಜತೆಗೆ ಖ್ಯಾತ ನಟ, ನಟಿ, ನಿರ್ದೇಶಕ ಮತ್ತು ಸಿನಿಮಾ ಕಲಾವಿದರ ಮೆಚ್ಚುಗೆಗೂ ಪಾತ್ರವಾಗಿದೆ. ಹೊಸದಾಗಿ ಮದುವೆಯಾಗುವ ಸಿನಿಮಾ ರಂಗದ ನವ ಜೋಡಿಗಳು ತಮ್ಮ ಮೊದಲ ವಿದೇಶ ಪ್ರವಾಸಕ್ಕೆ ಟ್ರಾವೆಲ್ ಮಾರ್ಟ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರಸಿದ್ಧ ನಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿ ತಮ್ಮ ಪ್ರತಿ ಪ್ರವಾಸವನ್ನೂ ಟ್ರಾವೆಲ್ ಮಾರ್ಟ್ ಮೂಲಕ ಯೋಜಿಸುತ್ತಾರೆ. 'ಟ್ರಾವೆಲ್ ಮಾರ್ಟ್ ಎಲ್ಲರ ನೆಚ್ಚಿನ ಪ್ರಯಾಣ ಸಂಸ್ಥೆಯಾಗಿ ವಿಶ್ವಾಸಾರ್ಹ ಪ್ರಯಾಣ ಸಂಗಾತಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ' ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್. ಇತ್ತೀಚಿಗೆ ಮದುವೆಯಾದ ಪ್ರಖ್ಯಾತ ನಿರ್ದೇಶಕ ತರುಣ್ ಸುಧೀರ್ ಹೀಗೆ ಹೇಳುತ್ತಾರೆ - ನಮ್ಮ ಹನಿಮೂನ್ ಟ್ರಿಪ್ಗಾಗಿ ನಾವು ಮಾಲ್ಡೀವ್ಸ್ ಅನ್ನು ಆಯ್ಕೆಮಾಡಿಕೊಂಡೆವು. ವಿಮಾನ ಟಿಕೆಟ್ ಬುಕಿಂಗ್, ಹೊಟೇಲ್ ಬುಕಿಂಗ್, ಪ್ರಯಾಣದ ಪರಿಪೂರ್ಣ ಯೋಜನೆಯನ್ನು ಟ್ರಾವೆಲ್ ಮಾರ್ಟ್ ರೂಪಿಸಿತ್ತು. ಮಾಲ್ಡೀವ್ಸ್ಗೆ ನಾವು ಮೊದಲ ಬಾರಿಗೆ ಭೇಟಿ ನೀಡಿದ್ದೆವು. ಇಡೀ ಪ್ರಯಾಣ ಅವಿಸ್ಮರಣೀಯವಾಗಿತ್ತು. ಬಹಳ ಅಚ್ಚುಕಟ್ಟಾಗಿ ಪ್ರವಾಸದುದ್ದಕ್ಕೂ ನಮಗೆ ನೆರವು ನೀಡಿದ ಟ್ರಾವೆಲ್ ಮಾರ್ಟ್ಗೆ ನಾವು ಧನ್ಯವಾದಗಳನ್ನು ತಿಳಿಸುತ್ತೇವೆ. ಅಷ್ಟೇ ಅಲ್ಲದೆ ನಾಯಕ ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಕೂಡ ಟ್ರಾವೆಲ್ ಮಾರ್ಟ್ನ ಸೇವೆಗೆ ಅಭಿನಂದನೆಗಳನ್ನು ತಿಳಿಸಿದೆ. ಅವರ ವಿದೇಶಿ ಪ್ರವಾಸದ ಯೋಜನೆಯ ಜವಾಬ್ದಾರಿಯನ್ನೂ ಟ್ರಾವೆಲ್ ಮಾರ್ಟ್ ವಹಿಸಿಕೊಂಡಿತ್ತು. ಹೀಗೆ ನೂರಾರು ಸಿನಿ ಕಲಾವಿದರ ಆಯ್ಕೆ ಎಂದರೆ ಅದು ಟ್ರಾವೆಲ್ ಮಾರ್ಟ್. ರೇಟಿಂಗ್ನಲ್ಲಿ ಫೈವ್ ಸ್ಟಾರ್ ಪಡೆಯುವ ಮೂಲಕ ದಾಖಲೆ ಬರೆದಿದೆ.

travel mart 9

ಪ್ರಶಸ್ತಿಗಳ ಗರಿ

ಟ್ರಾವೆಲ್ ಮಾರ್ಟ್ ತನ್ನ ಹದಿನಾರು ವರ್ಷಗಳ ನಿರಂತರ ಸೇವೆಯಿಂದ ಜನಮನ್ನಣೆಗೆ ಪಾತ್ರವಾಗಿದೆ. ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ದೇಶದಲ್ಲೇ ಅತ್ಯುನ್ನತ ಟ್ರಾವೆಲ್ ಏಜೆನ್ಸಿಯಾಗಿ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡಿದೆ.

  • ಇಂಡಸ್ಟ್ರಿ ರೆಕಗ್ನಿಷನ್ ಅಂಡ್ ಕ್ರೆಡಿಬಲಿಟಿ ಅವಾರ್ಡ್
  • ಎಕನಾಮಿಕ್ ಟೈಮ್ಸ್ ಅಚೀವಸ್ ಅವಾರ್ಡ್ ಕರ್ನಾಟಕ 2023-24
  • ಟಿವಿ9 ನ ನಾನು ನನ್ನ ಸಾಧನೆ ಪ್ರಶಸ್ತಿ ಗರಿ
  • ಸ್ಟಾರ್ಸ್ ಆಫ್ ಕರ್ನಾಟಕ ಅಚೀವರ್ಸ್ ಅವಾರ್ಡ್
  • ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ 2025
  • ಭಾರತೀಯ ಮತ್ತು ಯುಎಇ ಮಾನ್ಯತೆ ಪಡೆದ ಟ್ರಾವೆಲ್ ಮಾರ್ಟ್

ಪ್ರಮುಖ ಶಾಖೆಗಳು

ಹೆಡ್ ಆಫೀಸ್- ಜಯನಗರ ಟ್ರಾವೆಲ್ ಮಾರ್ಟ್ ಗೃಹ # 357, 10ನೇ ಬಿ ಮುಖ್ಯರಸ್ತೆ ಜಯನಗರ 3ನೇ ಬ್ಲಾಕ್ ಬೆಂಗಳೂರು- 560011 080 46427999

ಬ್ರ್ಯಾಂಚ್ ಆಫೀಸ್- ಮಲ್ಲೇಶ್ವರಂ 20, 1ನೇ ಟೆಂಪಲ್ ಸ್ಟ್ರೀಟ್ 10ನೇ ಅಡ್ಡರಸ್ತೆ ಮಲ್ಲೇಶ್ವರಂ, ಬೆಂಗಳೂರು-560003 080-46127999

ಬ್ರ್ಯಾಂಚ್ ಆಫೀಸ್- ಚೆನ್ನೈ ನಂ 66 ಸಿಸಾನ್ಸ್ ಕಾಂಪ್ಲೆಕ್ಸ್, 75, ರೆಡ್ ಕ್ರಾಸ್ ರಸ್ತೆ. ಎಗ್ಮೋರ್, ಚೆನ್ನೈ ತಮಿಳುನಾಡು 600008 044 43533313

ಟ್ರಾವೆಲ್ ಮಾರ್ಟ್ ಕಾರ್ಪೋರೇಟ್ ವೆಬ್ಸೈಟ್: www.trawelmart.com ಸಂಪರ್ಕ : 080 46427999 ಇಮೇಲ್: enquiry@trawelmart.com ಸೋಶಿಯಲ್ ಮೀಡಿಯಾ: @trawel_mart on Instagram | Facebook | YouTube

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ